ಮೈಸೂರು: ಮದುವೆಯಾದ ದಿನದಂದೇ ತನ್ನ ಪತ್ನಿಯನ್ನು ಕೊಂದು, ಗುಡ್ಡದಲ್ಲಿ ಹೂತುಹಾಕಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಲಕ್ಷ್ಮೀಪುರದ ಗಿರಿಜನಹಾಡಿಯಲ್ಲಿ ನಡೆದಿದೆ.
ಹಾಡಿಯ ನಿವಾಸಿಯಾದ ನಾಗರಾಜ್ ಅಲಿಯಾಸ್ ಪವನ್(19) ಎಂಬಾತನು ನಾಗಮ್ಮ ಎಂಬಾಕೆಯನ್ನು ಮದುವೆಯಾಗಿದ್ದನು. ಆದರೆ ಮದುವೆಯಾದ ದಿನದಂದೇ ಅವಳನ್ನು ಹತ್ಯೆ ಮಾಡಿ ಸಮೀಪದ ಕಲ್ಲುಗುಡ್ಡದಲ್ಲಿ ಮೃತದೇಹವನ್ನು ಮಣ್ಣಿನಿಂದ ಮುಚ್ಚಿ ಹಾಕಿದ್ದಾನೆ. ನಾಗಮ್ಮಳ ಕುಟುಂಬದವರು ಮಗಳು ಕಾಣದಿದ್ದಾಗ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದಾರೆ. ಪೋಲಿಸರು ಪ್ರಕರಣ ತನಿಖೆ ನಡೆಸುತ್ತಿದ್ದಾರೆ.
ಮದುವೆಯಾದ ದಿನವೇ ಮಡದಿಯ ಕೊಲೆ ಹತ್ಯೆ ಮಾಡಲು ಕಾರಣ?
ಪವನ್ ಹಾಗೂ ನಾಗಮ್ಮ ಪರಸ್ಪರ ಇಬ್ಬರು ಪ್ರೀತಿಸಿದ್ದರು. ಅಲ್ಲದೆ ಇವರಿಬ್ಬರ ಕುಟುಂಬದವರು ಸಂಬಂಧಿಕರೇ ಆಗಿದ್ದರು. ಈ ಮಧ್ಯೆ ನಾಗಮ್ಮ ಗರ್ಭಿಣಿಯಾಗಿದ್ದು, ಹಾಡಿಯ ಮುಖ್ಯಸ್ಥರು ಪಂಚಾಯಿತಿ ನಡೆಸಿ ಇವರಿಬ್ಬರಿಗೂ ಅಕ್ಟೋಬರ್ 10 ರಂದು ಮದುವೆ ಮಾಡಿಸಿದ್ದಾರೆ. ಆದರೆ ನಾಗಮ್ಮ ಅನೈತಿಕ ಸಂಬಂಧ ಹೊಂದಿದ್ದಳು ಎಂದು ಆಕೆಯ ಮೇಲೆ ಸಂಶಯಪಟ್ಟಿದ್ದನಂತೆ. ಮದುವೆಯಾದ ದಿನವೇ ಪತ್ನಿಯನ್ನು ಕಲ್ಲುಗುಡ್ಡಕ್ಕೆ ಕರೆದೊಯ್ದು, ಗಿಡದ ಬಳ್ಳಿಯನ್ನು ಕುತ್ತಿಗೆಗೆ ಬಿಗಿದು ಹತ್ಯೆ ಮಾಡಿ, ಗುಡ್ಡದ ಬಂಡೆಯ ಕೆಳಗೆ ಮೃತದೇಹವನ್ನಿಟ್ಟು ಮಣ್ಣು ಮುಚ್ಚಿದ್ದಾಗಿ ಪವನ್ ಪೊಲೀಸರೆದುರು ಹೇಳಿದ್ದಾನೆ.
ಈ ಸಂಬಂಧ ಬೆಟ್ಟದಪುರ ಪೊಲೀಸರು ಪ್ರಕರಣ ದಾಖಸಿಕೊಂಡು ಆರೋಪಿ ಪವನ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.