ಮೈಸೂರು:ಹುಣಸೂರು ತಾಲೂಕಿನಲ್ಲಿ ಮಂಗಳವಾರ ನಾಲ್ವರು ಸೋಂಕಿಗೆ ಬಲಿಯಾಗಿದ್ದು, ನಾಲ್ಕು ಗ್ರಾಮಗಳನ್ನು ಸೀಲ್‌ಡೌನ್ ಮಾಡಲಾಗಿದೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಅರಸು ಕಲ್ಲಹಳ್ಳಿಯ ನಾಲ್ವರು ಸೋಂಕಿಗೆ ಮೃತಪಟ್ಟಿದ್ದು, ಈವರೆಗೆ 42 ಮಂದಿ ಸಾವನ್ನಪ್ಪಿದ್ದಾರೆ.
ಪರೀಕ್ಷಾ ವರದಿ ವಿಳಂಬ:

ಸಾರ್ವಜನಿಕರು ತಮ್ಮ ಗಂಟಲು ದ್ರವ ಮಾದರಿಯನ್ನು ಪರೀಕ್ಷಿಸಿಕೊಂಡರೂ ವರದಿ ಬರುವುದು ತಡವಾಗುತ್ತಿದೆ. ಇದರಿಂದ ಸೋಂಕು ಇತರರಿಗೆ ಹರಡಲು ಕಾರಣವಾಗುತ್ತಿದೆ.
ಗ್ರಾಮಗಳು ಸೀಲ್ ಡೌನ್:
ಕೊರೊನಾ ಸೋಂಕಿತರು ಹೆಚ್ಚಿರುವ ತಾಲೂಕಿನ ಹನಗೋಡು ಹೋಬಳಿಯ ಕಲ್ಲಹಳ್ಳಿ, ಗಾವಡಗೆರೆ ಹೋಬಳಿಯ ಮುಳ್ಳೂರು, ಕೃಷ್ಣಾಪುರ ಹಾಗೂ ಬಿಳಿಕರೆ ಹೋಬಳಿಯ ಕೆಂಪಮ್ಮನ ಹೊಸೂರು ಗ್ರಾಮಗಳನ್ನು ಸೀಲ್‌ಡೌನ್ ಮಾಡಲಾಗಿದೆ.
ಈ ಗ್ರಾಮಗಳಿಗೆ ತೆರಳಿದ ತಹಶೀಲ್ದಾರ್ ಬಸವರಾಜ್, ತಾ.ಪಂ.ಇ.ಓ.ಗಿರೀಶ್ ನೇತೃತ್ವದ ತಂಡ ಗ್ರಾಮಗಳನ್ನು ಗ್ರಾ.ಪಂ. ಹಾಗೂ ಆರೋಗ್ಯ ಇಲಾಖೆ ಸಹಕಾರದಿಂದ ನಿರ್ಬಂಧಿಸಿ ರಸ್ತೆಗಳನ್ನು ಬಂದ್ ಮಾಡಿಸಿದ್ದಾರೆ. ಹಾಲಿನ ಡೈರಿಯನ್ನು ಸಹ ಮುಚ್ಚಿಸಲಾಗಿದೆ. ಹೊರಗಿನ ಜನರು ಗ್ರಾಮದೊಳಕ್ಕೆ ಬಾರದಂತೆ ನಿರ್ಬಂಧಿಸಲಾಗಿದೆ. ಸದ್ಯ ಈ ಗ್ರಾಮಗಳಲ್ಲಿ ಕೊರೊನಾ ಪರೀಕ್ಷೆ ಪೂರ್ಣ ಪ್ರಮಾಣದಲ್ಲಿ ನಡೆಯಲಿದೆ.