ಕರ್ನಾಟಕ

karnataka

ETV Bharat / state

3ನೇ ಬಾರಿ ಗೆದ್ದ ಹೆಚ್​​​.ಪಿ. ಮಂಜುನಾಥ್​.. ಗೆಲುವಿನ ಓಟ ಹೀಗಿತ್ತು...! - ಹುಣಸೂರು ಕಾಂಗ್ರೆಸ್​ ಅಭ್ಯರ್ಥಿಗೆ ಗೆಲುವು

ತೀವ್ರ ಕುತೂಹಲ ಮೂಡಿಸಿದ್ದ ಹುಣಸುರು ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್, ಬಿಜೆಪಿ ಅಭ್ಯರ್ಥಿ ಹೆ.ವಿಶ್ವನಾಥ್ ವಿರುದ್ಧ 39,727 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.

hunsur congress candidate latest news, ಹುಣಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯ
ಹೆಚ್.ಪಿ.ಮಂಜುನಾಥ್

By

Published : Dec 9, 2019, 3:18 PM IST

Updated : Dec 9, 2019, 3:28 PM IST

ಮೈಸೂರು: ಬಿಜೆಪಿ ಅಭ್ಯರ್ಥಿ ಹೆಚ್.ವೀಶ್ವನಾಥ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ.ಮಂಜುನಾಥ್ ಭರ್ಜರಿ ಜಯ ಸಾಧಿಸಿದ್ದು, ಮೂರನೇ ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

ಮೊದಲ ಸುತ್ತಿನಿಂದ ಕೊನೆಯ 20ನೇ ಸುತ್ತಿನವರೆಗೂ ಸತತವಾಗಿ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ.ಮಂಜುನಾಥ್ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ 4,707 ಮತ, ಎರಡನೇ ಸುತ್ತಿನಲ್ಲಿ 8,439 ಮತ ಪಡೆದರೆ, ಮೂರನೇ ಸುತ್ತಿನಲ್ಲಿ 12,356, ನಾಲ್ಕನೇ ಸುತ್ತಿನಲ್ಲಿ 16,990 ಮತ ಪಡೆದರು.

ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ.ಮಂಜುನಾಥ್ ಗೆಲುವು

ಐದನೇ ಸುತ್ತಿನಲ್ಲಿ 21,097 ಮತ ಪಡೆದರೆ, ಆರನೇ ಸುತ್ತಿನಲ್ಲಿ 24,874, ಏಳನೇ ಸುತ್ತಿನಲ್ಲಿ 30,404, ಎಂಟನೇ ಸುತ್ತಿನಲ್ಲಿ 36,134, ಒಂಬತ್ತನೆಯ ಸುತ್ತಿನಲ್ಲಿ 40,850 ಮತ, ಹತ್ತನೇ ಸುತ್ತಿನಲ್ಲಿ 46,158 ಮತಗಳು, ಹನ್ನೊಂದನೇ ಸುತ್ತಿನಲ್ಲಿ 50,885 ಮತಗಳು, ಹನ್ನೆರಡನೆಯ ಸುತ್ತಿನಲ್ಲಿ 55,171ಮತಗಳು, ಹದಿಮೂರನೇ ಸುತ್ತಿನಲ್ಲಿ 60,367 ಮತಗಳು, ಹದಿನಾಲ್ಕನೇ ಸುತ್ತಿನಲ್ಲಿ 64,788 ಮತಗಳನ್ನು ಪಡೆದರೆ, ಹದಿನೈದನೆ ಸುತ್ತಿನಲ್ಲಿ 69,813 ಮತ, ಹದಿನಾರನೇ ಸುತ್ತಿನಲ್ಲಿ 75,540, ಹದಿನೇಳನೇ ಸುತ್ತಿನಲ್ಲಿ 81,266, ಹದಿನೆಂಟನೇ ಸುತ್ತಿನಲ್ಲಿ 85,508, ಹತ್ತೊಂಬತ್ತನೆಯ ಸುತ್ತಿನಲ್ಲಿ 90,467 ಹಾಗೂ ಅಂತಿಮ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ 92,629 ಮತಗಳನ್ನು ಪಡೆದು, ವಿಶ್ವನಾಥ್ ವಿರುದ್ಧ 39,727 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.

ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಹೆಚ್. ವಿಶ್ವನಾಥ್ 52,970 ಮತ ಪಡೆದರೆ. ಜೆಡಿಎಸ್ ಅಭ್ಯರ್ಥಿ ದೇವರಳ್ಳಿ ಸೋಮಶೇಖರ್ 32,895 ಮತ ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಇತ್ತ 994 ಮತಗಳು ನೋಟಾಕ್ಕೆ ಚಲಾವಣೆಗೊಂಡಿವೆ.

Last Updated : Dec 9, 2019, 3:28 PM IST

ABOUT THE AUTHOR

...view details