ಕರ್ನಾಟಕ

karnataka

ETV Bharat / state

ಹುಣಸೂರು ಉಪ ಕದನ: ಮೂರು ಪಕ್ಷಗಳ ಅಭ್ಯರ್ಥಿಗಳು ಫೈನಲ್​​​​ - Hunsur by-election news

ಸುಪ್ರೀಂ ಕೋರ್ಟಿನ ತೀರ್ಪಿನ ಬಳಿಕ ಹುಣಸೂರು ಉಪ ಚುನಾವಣೆಗೆ ಮೂರು ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಿದೆ. ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ.ಮಂಜುನಾಥ್ ನಾಮಪತ್ರ ಸಲ್ಲಿಸಿದ್ದು, ಉಪ ಚುನಾವಣಾ ಕಣ ರಂಗೇರಿದೆ.

ಹುಣಸೂರು ಉಪ ಚುನಾವಣೆ: ಮೂರು ಪಕ್ಷದ ಅಭ್ಯರ್ಥಿಗಳು ಫೈನಲ್

By

Published : Nov 14, 2019, 5:33 PM IST

ಮೈಸೂರು:ಸುಪ್ರೀಂ ಕೋರ್ಟಿನ ತೀರ್ಪಿನ ಬಳಿಕ ಹುಣಸೂರು ಉಪ ಚುನಾವಣೆಗೆ ಮೂರು ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಿದೆ. ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ.ಮಂಜುನಾಥ್ ನಾಮಪತ್ರ ಸಲ್ಲಿಸಿದ್ದು, ಉಪ ಚುನಾವಣಾ ಕಣ ರಂಗೇರಿದೆ.

ಒಟ್ಟು 2,26,920 ಮತದಾರರಿರುವ ಕ್ಷೇತ್ರದಲ್ಲಿ 20 ವರ್ಷಗಳ ನಂತರ ಉಪ ಚುನಾವಣೆ ನಡೆಯುತ್ತಿದ್ದು, ಕಳೆದ ಬಾರಿ ಜೆಡಿಎಸ್​​ನಿಂದ ಶಾಸಕರಾಗಿ ಆಯ್ಕೆಯಾಗಿದ್ದ ಹೆಚ್.ವಿಶ್ವನಾಥ್ ರಾಜೀನಾಮೆಯಿಂದ ತೆರವಾದ ಕ್ಷೇತ್ರಕ್ಕೆ ಈಗ ಉಪ ಚುನಾವಣೆ ನಡೆಯುತ್ತಿದೆ. ಈಗಾಗಲೇ ಉಪ ಚುನಾವಣಾ ಕಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ.ಮಂಜುನಾಥ್ ನಾಮಪತ್ರ ಸಲ್ಲಿಸಿದ್ದು, ಜೆಡಿಎಸ್​​ನಿಂದ ಮೊದಲ ಬಾರಿಗೆ ಜಿ.ಟಿ.ದೇವೆಗೌಡ ಕುಟುಂಬದ ಹೊರತಾಗಿ ಹೊಸ ಮುಖ ಸೋಮಶೇಖರ್ ಜೆಡಿಎಸ್​​ನಿಂದ ಟಿಕೆಟ್ ಪಡೆದಿದ್ದಾರೆ. ಬಿಜೆಪಿಯಿಂದ ಹೆಚ್.ವಿಶ್ವನಾಥ್ ಟಿಕೆಟ್ ಪಡೆದಿದ್ದು, ಈಗ ಉಪ ಚುನಾವಣೆ ಕಣ ರಂಗಾಗಿದೆ. ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ.

ಜಿ.ಟಿ.ಡಿ. ಕುಟುಂಬಕ್ಕೆ ಕೈ ತಪ್ಪಿದ ಜೆಡಿಎಸ್ ಟಿಕೆಟ್: ಒಕ್ಕಲಿಗರ ಪ್ರಾಬಲ್ಯವಿರುವ ಹುಣಸೂರು ಕ್ಷೇತ್ರದಲ್ಲಿ ಜಿ.ಟಿ.ಡಿ. ಕುಟುಂಬ ಬಿಗಿ ಹಿಡಿತ ಸಾಧಿಸಿದ್ದು, ಜಿ.ಟಿ.ದೇವೆಗೌಡರ ಪುತ್ರ ಹರೀಶ್ ಗೌಡ ಭಾವಿ ಅಭ್ಯರ್ಥಿ ಎಂದೇ ಬಿಂಬಿತವಾಗಿ ಹುಣಸೂರಿನ ಪ್ರತಿಯೊಂದು ಗ್ರಾಮದಲ್ಲೂ ಕೆಲಸ ಮಾಡಿದ್ದರು‌. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜಿ.ಟಿ.ದೇವೆಗೌಡರು ಉಪ ಚುನಾವಣೆಯಲ್ಲಿ ಪ್ರಚಾರಕ್ಕೆ ಹೋಗದೆ ತಟಸ್ಥವಾಗಿ ಇರುತ್ತೇನೆ ಎಂದು ಘೋಷಿಸಿದ್ದಾರೆ.

ABOUT THE AUTHOR

...view details