ಕರ್ನಾಟಕ

karnataka

ETV Bharat / state

ಹುಣಸೂರು ರಣಾಂಗಣ: ಇಂದು ಸಿದ್ದರಾಮಯ್ಯ ಪ್ರಚಾರ... ಕ್ಷೇತ್ರದಲ್ಲೇ ವಾಸ್ತವ್ಯ ಹೂಡಿದ ಶ್ರೀರಾಮುಲು - Hunsur By election: opposition leader siddaramaiah starts campign in hunsur

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಾಗಿರುವ ಮೈಸೂರಿನ ಹುಣಸೂರಿನಲ್ಲೂ ಚುನಾವಣಾ ಅಖಾಡ ರಂಗೇರಿದ್ದು, ಇಂದು ಸಿದ್ದರಾಮಯ್ಯ ಇಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಹಾಗೆಯೇ ಬಿಜೆಪಿ ಕೂಡ ಇಲ್ಲಿ ಹೆಚ್​ ವಿಶ್ವನಾಥ್​ ಅವರನ್ನು ಗೆಲ್ಲಿಸಲು ಪಣ ತೊಟ್ಟಿದ್ದು, ಶ್ರೀರಾಮುಲು ಅವರನ್ನು ಪ್ರಚಾರದ ಅಖಾಡಕ್ಕಿಳಿಸಿದೆ.

ಇಂದು ಸಿದ್ದರಾಮಯ್ಯ ಪ್ರಚಾರ... ಕ್ಷೇತ್ರದಲ್ಲೇ ವಾಸ್ತವ್ಯ ಹೂಡಿದ ಶ್ರೀರಾಮುಲು

By

Published : Nov 20, 2019, 10:30 AM IST

ಮೈಸೂರು: ಉಪ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಇಂದು ಸಿದ್ದರಾಮಯ್ಯ ಅಧಿಕೃತವಾಗಿ ಅಖಾಡಕ್ಕಿಳಿಯಲಿದ್ದು, ಇಂದು ಹುಣಸೂರಿನ 16 ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

ತಮ್ಮ ಕಟ್ಟಾ ಬೆಂಬಲಿಗ, ಹುಣಸೂರು ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ ಮಂಜುನಾಥ್ ಪರವಾಗಿ ಬೆಳಗ್ಗಿನಿಂದ ಸಂಜೆ 6 ಗಂಟೆವರೆಗೂ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

ಇಂದು ಸಿದ್ದರಾಮಯ್ಯ ಪ್ರಚಾರ ಕಾರ್ಯದ ಪಟ್ಟಿ

ಹುಣಸೂರಿನಲ್ಲಿ ವಾಸ್ತವ್ಯ ಹೂಡಿರುವ ಶ್ರೀ ರಾಮುಲು

ಇತ್ತ ಬಿಜೆಪಿ ಕೂಡ ಉಪ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿ ಹೆಚ್.ವಿಶ್ವನಾಥ್ ಗೆಲ್ಲಿಸಬೇಕೆಂದು ಪಣ ತೊಟ್ಟಿದ್ದು, ಸಚಿವ ಶ್ರೀರಾಮುಲು ಅವರಿಗೆ ಇಲ್ಲಿನ ಉಸ್ತುವಾರಿ ನೀಡಿದೆ. ಕಳೆದ ೨ ದಿನಗಳಿಂದ ಸಚಿವ ಶ್ರೀ ರಾಮುಲು ಹುಣಸೂರಿನಲ್ಲೇ ವಾಸ್ತವ್ಯ ಹೂಡಿದ್ದು, ತಮ್ಮ ಸಮುದಾಯದ ಮುಖಂಡರು ಹಾಗೂ ವಿವಿಧ ಸಂಘಟನೆಯ ಮುಖಂಡರನ್ನು ಭೇಟಿಯಾಗಿ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ. ಇಲ್ಲಿ ಸಿದ್ದರಾಮಯ್ಯ ವಿರುದ್ಧ ಬಾದಾಮಿಯ ಸೋಲಿನ ಹಗೆ ತೀರಿಸಿಕೊಳ್ಳಲು ಚುನಾವಣಾ ತಂತ್ರ ಹೆಣೆಯುತ್ತಿದ್ದಾರೆ. ಬಿಜೆಪಿಗೆ ಇತ್ತೀಚೆಗೆ ಮರು ಸೇರ್ಪಡೆಯಾದ ಸಿ.ಹೆಚ್‌ ವಿಜಯ್ ಶಂಕರ್ ಅವರು ಶ್ರೀರಾಮುಲು ಅವರಿಗೆ ಸಾಥ್ ನೀಡಿದ್ದಾರೆ.

ಕ್ಷೇತ್ರದಲ್ಲೇ ವಾಸ್ತವ್ಯ ಹೂಡಿದ ಶ್ರೀರಾಮುಲು

ABOUT THE AUTHOR

...view details