ಕರ್ನಾಟಕ

karnataka

ETV Bharat / state

ಮನವೊಲಿಕೆಗೆ ಬಂದ ಚುನಾವಣಾಧಿಕಾರಿಗೆ ಕ್ಲಾಸ್​ ತೆಗೆದುಕೊಂಡ ಗ್ರಾಮಸ್ಥರು! - Grama Panchayat elections boycotted by the villagers

ಏಷಿಯನ್ ಪೇಂಟ್ಸ್ ಕಾರ್ಖಾನೆಗೆ ಜಮೀನು ನೀಡಿದ ರೈತರ ಕುಟುಂಬಗಳಿಗೆ ಉದ್ಯೋಗ ನೀಡುವವರೆಗೆ ಗ್ರಾಮ ಪಂಚಾಯತ್​ ಚುನಾವಣೆ ಬೇಡವೆಂದು ಹಠ ತೊಟ್ಟಿರುವ ಹುಳಿಮಾವು ಗ್ರಾಮಸ್ಥರ ಮನವೊಲಿಕೆಗೆ ಚುನಾವಣಾಧಿಕಾರಿಗಳು ತೆರಳಿದ್ದಾರೆ..

hulimavu-villagers-outrage-against-electoral-officer
ಮನವೊಲಿಕೆಗೆ ಬಂದ ಚುನಾವಣಾಧಿಕಾರಿಗೆ ಕ್ಲಾಸ್​ ತೆಗೆದುಕೊಂಡ ಗ್ರಾಮಸ್ಥರು

By

Published : Dec 9, 2020, 5:42 PM IST

ಮೈಸೂರು : ಗ್ರಾಮ‌ ಪಂಚಾಯತ್‌ ಚುನಾವಣೆ ಬಹಿಷ್ಕಾರ ಮಾಡಿರುವ ಗ್ರಾಮಸ್ಥರ ಮನವೊಲಿಸಲು ಬಂದ ಚುನಾವಣಾಧಿಕಾರಿಯನ್ನೇ ದಿಗ್ಬಂಧನ ಮಾಡಿ ತರಾಟೆ ತೆಗೆದುಕೊಂಡಿರುವ ಘಟನೆ ಹುಳಿಮಾವು ಗ್ರಾಮದಲ್ಲಿ ನಡೆದಿದೆ.

ಮನವೊಲಿಕೆಗೆ ಬಂದ ಚುನಾವಣಾಧಿಕಾರಿಗೆ ಕ್ಲಾಸ್​ ತೆಗೆದುಕೊಂಡ ಗ್ರಾಮಸ್ಥರು..

ನಂಜನಗೂಡು ತಾಲೂಕಿನ ಅಡಕನಹಳ್ಳಿ‌ ಕೈಗಾರಿಕಾ ಪ್ರದೇಶದಲ್ಲಿರುವ ಏಷಿಯನ್ ಪೇಂಟ್ಸ್ ಕಾರ್ಖಾನೆಗೆ ಜಮೀನು ನೀಡಿದ ರೈತರ ಕುಟುಂಬಗಳಿಗೆ ಉದ್ಯೋಗ ನೀಡುವವರೆಗೆ ಗ್ರಾಮ ಪಂಚಾಯತ್​ ಚುನಾವಣೆ ಬೇಡವೆಂದು ಹಠ ತೊಟ್ಟಿರುವ ಹುಳಿಮಾವು ಗ್ರಾಮಸ್ಥರ ಮನವೊಲಿಕೆಗೆ ಚುನಾವಣಾಧಿಕಾರಿಗಳು ತೆರಳಿದ್ದಾರೆ.

ಓದಿ:ಕರ್ನಾಟಕದಲ್ಲಿ ಮಾನವ ಕಳ್ಳಸಾಗಾಣಿಕೆ: ವೇಶ್ಯಾವಾಟಿಕೆ ದಂಧೆಗಾಗಿ ಮಹಿಳೆಯರ ಅಪಹರಣ

ನಂತರ ಎಲ್ಲ ಗ್ರಾಮಸ್ಥರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ ಎಂದು ಚುನಾವಣಾಧಿಕಾರಿಗಳು ಮನವಿ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ದಿಗ್ಬಂಧನ ಹಾಕಿ,ಮೊದಲು ಕೆಲಸ ಕೊಡಿಸಿ, ನಂತರ ಮತದಾನ ಮಾಡ್ತೀವಿ ಎಂದು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

For All Latest Updates

TAGGED:

ABOUT THE AUTHOR

...view details