ಕರ್ನಾಟಕ

karnataka

ETV Bharat / state

ಕೆಪಿಎಲ್​​​ನಲ್ಲಿ ಬೆಂಗಳೂರು ಬ್ಲಾಸ್ಟರ್​​ ವಿರುದ್ಧ ಘರ್ಜಿಸಿದ ಹುಬ್ಬಳ್ಳಿ ಟೈಗರ್ಸ್ - hubballi tigers won against bangalore blaster in kpl

ಮಾನಸ ಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದ ಕೆಪಿಎಲ್​ ಪಂದ್ಯಾವಳಿಯಲ್ಲಿ ಹುಬಳ್ಳಿ ಟೈಗರ್ಸ್ ತಂಡವು ಬೆಂಗಳೂರು ಬ್ಲಾಸ್ಟರ್ ವಿರುದ್ಧ ಜಯ ಸಾಧಿಸಿತು.

ಹುಬಳ್ಳಿ ಟೈಗರ್ಸ್

By

Published : Aug 28, 2019, 5:31 AM IST

ಮೈಸೂರು:ಕ್ಯಾಪ್ಟನ್ ವಿನಯ್ ಕುಮಾರ್ ಅವರ 81 ರನ್‍ಗಳ ಅಜೇಯ ಬ್ಯಾಟಿಂಗ್ ಹಾಗೂ ಮೊಹಮ್ಮದ್ ತಹ ಅವರ 48 ರನ್‍ಗಳ ಅಮೋಘ ಆಟದಿಂದ ಹುಬಳ್ಳಿ ಟೈಗರ್ಸ್ ತಂಡವು, ಬೆಂಗಳೂರು ಬ್ಲಾಸ್ಟರ್ ತಂಡವನ್ನು 7 ವಿಕೆಟ್‍ಗಳಿಂದ ಮಣಿಸಿದೆ.

ಟಾಸ್‍ ಗೆದ್ದ ಹುಬಳ್ಳಿ ಟೈಗರ್ಸ್ ತಂಡವು, ಬೆಂಗಳೂರು ಬ್ಲಾಸ್ಟರ್​ಗೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಕೊಟ್ಟಿತು. ಬೆಂಗಳೂರು ತಂಡದ ಕೊನೆಯಾಂಕದ ಬ್ಯಾಟ್ಸ್​ಮನ್ ಭರತ್ ಧೂರಿ 42 ರನ್ ಗಳಿಸಿದ್ದು ಬಿಟ್ಟಿರೆ ಉಳಿದ ಬ್ಯಾಟ್ಸ್​ಮನ್‍ಗಳು ತಂಡಕ್ಕೆ ರನ್ ವೇಗ ಹೆಚ್ಚಿಸಲು ತಿಣುಕಾಡಿದರು. 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 158 ರನ್​ಗಳ ಸ್ಪರ್ಧಾತ್ಮಕ ಮೊತ್ತವನ್ನು ದಾಖಲಿಸಿತು. ಈ ಗುರಿ ಬೆನ್ನತ್ತಿದ್ದ ಹುಬಳ್ಳಿ ಟೈಗರ್ಸ್ ಕ್ಯಾಪ್ಟನ್ ವಿನಯ್ ಕುಮಾರ್ ಔಟ್ ಆಗದೆ 81 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಲು ಪ್ರಮುಖ ಪಾತ್ರ ವಹಿಸಿದರು.

ಬೆಂಗಳೂರು ಬ್ಲಾಸ್ಟರ್​​ ವಿರುದ್ದ ಘರ್ಜಿಸಿದ ಹುಬಳ್ಳಿ ಟೈಗರ್ಸ್

ಮೊಹಮ್ಮದ್ ತಹ(48), ಲುವ್‍ನಿತ್ ಸಿಸೊಡಿಯಾ(0), ಕೆ.ಬಿ.ಪವನ್(11), ಕೆ.ಎಲ್.ಶ್ರಜಿತ್ ಔಟಾಗದೇ 17 ರನ್ ಸೇರಿಸಿ ತಂಡಕ್ಕೆ ಆಶ್ರಯ ನೀಡಿದರು. ಹುಬ್ಬಳ್ಳಿ ಟೈಗರ್ಸ್ ಬೌಲರ್ ಡೇವಿಡ್ ಮ್ಯಾಥಿಯಿಸ್ 4, ಆದಿತ್ಯ ಸೋಮಣ್ಣ 2, ಅಭಿಲಾಷ್ ಶೆಟ್ಟಿ, ಮಿತ್ರಕಾಂತ್ ಯಾದವ್, ಶ್ರೇಯಸ್ ಗೋಪಾಲ್ ತಲಾ ಒಂದೊಂದು ವಿಕೆಟ್ ಪಡೆದರು. ಬೆಂಗಳೂರು ಬ್ಲಾಸ್ಟರ್ಸ್‍ನ ಬೌಲರ್​ಗಳಾದ ವಿ.ಕೌಶಿಕ್, ಮನೋಜ್ ಎಸ್.ಭಂಡಾಗೆ,ಕಿಶೋರ್ ಕಾಮತ್ ತಲಾ ಒಂದೊಂದು ವಿಕೆಟ್ ಪಡೆದರು.

ಹುಬಳ್ಳಿ ಟೈಗರ್ಸ್, ಬೆಂಗಳೂರು ಬ್ಲಾಸ್ಟರ್ ತಂಡವನ್ನು 7 ವಿಕೆಟ್‍ಗಳಿಂದ ಮಣಿಸಿದೆ

ABOUT THE AUTHOR

...view details