ಕರ್ನಾಟಕ

karnataka

ETV Bharat / state

ಕಾಲು ತೊಳೆಯಲು ನದಿಗೆ ತೆರಳಿದ ಗೃಹಿಣಿ.. ಸೆಲ್ಫಿ ಕ್ಲಿಕ್ಕಿಸುತ್ತ ಜಾರಿ ಬಿದ್ದು ಸಾವು - ಮೈಸೂರಿನಲ್ಲಿ ಸೆಲ್ಫಿ ದುರಂತ

ದೇವಾಲಯ ಪ್ರವೇಶಕ್ಕೂ ಮುನ್ನ ಕಾಲು ತೊಳೆಯಲು ನದಿಗೆ ತೆರಳಿದ್ದ ಗೃಹಿಣಿ ಸೆಲ್ಫಿ ತೆಗೆಯುವ ವೇಳೆ ಜಾರಿ ನದಿಗೆ ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

housewife dies after falling river when taking a selfie in Mysore, Mysore housewife died, Selfie tragedy in Mysore, Mysore news, ಮೈಸೂರಿನಲ್ಲಿ ಸೆಲ್ಫಿ ತೆಗೆಯುವಾಗ ನದಿಗೆ ಬಿದ್ದು ಗೃಹಿಣಿ ಸಾವು, ಮೈಸೂರು ಗೃಹಿಣಿ ಸಾವು, ಮೈಸೂರಿನಲ್ಲಿ ಸೆಲ್ಫಿ ದುರಂತ, ಮೈಸೂರು ಸುದ್ದಿ,
ಕವಿತಾ ಮೃತ ಗೃಹಿಣಿ

By

Published : May 7, 2022, 1:23 PM IST

ಮೈಸೂರು :ಸೆಲ್ಫಿ ತೆಗೆಯುವ ವೇಳೆ ಕಾಲು ಜಾರಿ ನದಿಗೆ ಬಿದ್ದು ಗೃಹಿಣಿಯೊಬ್ಬರು ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕಿನ ಶ್ರೀ ಕ್ಷೇತ್ರ ಸಂಗಮದ ಕಪಿಲಾದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಚಾಮರಾಜನಗರ ಜಿಲ್ಲೆಯ ನಿವಾಸಿ ಎಂದು ಗುರುತಿಸಲಾಗಿದೆ.

ಕವಿತಾ ಮೃತ ಗೃಹಿಣಿ

ಚಾಮರಾಜನಗರ ಜಿಲ್ಲೆಯ ನಂಜದೇವನಪುರ ಗ್ರಾಮದ ಗಿರೀಶ್ ಎಂಬುವರ ಪತ್ನಿ 38 ವರ್ಷದ ಕವಿತಾ ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಮೃತ ಗೃಹಿಣಿ ಕವಿತಾ ನಿನ್ನೆ ಅವರ ಪತಿ ಗಿರೀಶ್ ಹಾಗೂ ಪುತ್ರಿಯ ಜೊತೆ ಸಂಗಮ ಕ್ಷೇತ್ರಕ್ಕೆ ಪೂಜೆ ಸಲ್ಲಿಸಲು ಬಂದಿದ್ದರು.

ಓದಿ:ಸಂಬಳ ಹಾಕದ ಹಿನ್ನೆಲೆ: ಸೆಲ್ಫಿ ವಿಡಿಯೋ ಮಾಡಿ ಲಾರಿ ಚಾಲಕ ಆತ್ಮಹತ್ಯೆ

ಸೆಲ್ಫಿ ತೆಗೆಯುವ ವೇಳೆ ಕಾಲು ಜಾರಿ ನದಿಗೆ ಬಿದ್ದು ಗೃಹಿಣಿ ಸಾವು

ದೇವಾಲಯ ಪ್ರವೇಶಕ್ಕೂ ಮುನ್ನ ಶ್ರೀಕ್ಷೇತ್ರ ಸಂಗಮದ ಮುಂಭಾಗದಲ್ಲಿರುವ ಕಪಿಲಾ ನದಿ ದಡದಲ್ಲಿ ಕಾಲು ತೊಳೆಯಲು ಹೋಗಿದ್ದರು. ಕಾಲು ತೊಳೆದು ನೀರು ಸೇವಿಸಿದ ಬಳಿಕ ತಮ್ಮ ಮೊಬೈಲ್ ಫೋನಿನ ಮೂಲಕ ಸೆಲ್ಫಿ ತೆಗೆಯಲು ಮುಂದಾಗಿದ್ದಾರೆ. ಈ ವೇಳೆ ಕಾಲು ಜಾರಿ ನದಿಗೆ ಬಿದ್ದ ಕವಿತಾ ತಮ್ಮ ಪ್ರಾಣವನ್ನ ಕಳೆದುಕೊಂಡಿದ್ದಾರೆ

ಕವಿತಾ ಮೃತ ಗೃಹಿಣಿ

ಕವಿತಾರನ್ನ ಕಳೆದುಕೊಂಡ ಪತಿ ಗಿರೀಶ್ ಮತ್ತು ಅವರ ಪುತ್ರಿಯ ಆಕ್ರಂದನ ಮುಗಿಲುಮುಟ್ಟಿದೆ. ಮೃತ ದೇಹವನ್ನು ನದಿಯಿಂದ ಹೊರತೆಗೆದು ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details