ಕರ್ನಾಟಕ

karnataka

ETV Bharat / state

ಮನೆ ಗೋಡೆ ಕುಸಿತ.. ಪ್ರಾಣಾಪಾಯದಿಂದ ಪಾರಾದ ಕುಟುಂಬ - ಮನೆ ಗೋಡೆ ಕುಸಿತ ಪ್ರಾಣಾಪಾಯದಿಂದ ಪಾರಾದ ಕುಟುಂಬ

ಭಾರಿ ಮಳೆಗೆ ಮನೆ ಗೋಡೆ ಕುಸಿತ. ಪ್ರಾಣಾಪಾಯದಿಂದ ಪಾರಾದ ಕುಟುಂಬಸ್ಥರು. ನಂಜನಗೂಡಿನ ಶ್ರೀರಾಮಪುರ ಬಡಾವಣೆಯಲ್ಲಿ ಘಟನೆ

House wall collapse due to rain at Mysore
ಮನೆ ಗೋಡೆ ಕುಸಿತ.. ಪ್ರಾಣಾಪಾಯದಿಂದ ಪಾರಾದ ಕುಟುಂಬ

By

Published : Oct 15, 2022, 1:11 PM IST

ಮೈಸೂರು:ಬಿರುಗಾಳಿ ಸಹಿತ ಭಾರಿ ಮಳೆಗೆ ಮನೆ ಗೋಡೆ ಕುಸಿತಗೊಂಡಿದ್ದು, ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಂಜನಗೂಡಿನ ಶ್ರೀರಾಮಪುರ ಬಡಾವಣೆಯಲ್ಲಿ ನಡೆದಿದೆ.

ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಶ್ರೀರಾಮಪುರ ಬಡಾವಣೆಯ ಮಹದೇವಮ್ಮ ಎಂಬುವವರಿಗೆ ಸೇರಿದ ಮನೆ ನೆಲಕಚ್ಚಿದೆ. ಮನೆಯೊಳಗೆ ಮಲಗಿದ್ದ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮನೆ ಗೋಡೆ ಕುಸಿತ.. ಪ್ರಾಣಾಪಾಯದಿಂದ ಪಾರಾದ ಕುಟುಂಬ

'ಮನೆ ಗೋಡೆ ಹೊರಗಡೆ ಕುಸಿದು ಬಿದ್ದಿದೆ. ಒಳಗಡೆಗೆ ಬಿದ್ದಿದ್ದರೆ ನಾವು ಬದುಕುಳಿಯುತ್ತಿರಲಿಲ್ಲ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದೇವೆ. ಮನೆಯಲ್ಲಿದ್ದ ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ದವಸ ಧಾನ್ಯಗಳು ಹಾನಿಯಾಗಿದೆ. ನಾವು ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ನಮಗೆ ವಾಸಿಸಲು ಮನೆ ಇಲ್ಲ. ಮನೆ ನಿರ್ಮಾಣ ಮಾಡಿಕೊಡಿ' ಎಂದು ಸಂತ್ರಸ್ತೆ ಮಹದೇವಮ್ಮ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ:ರೊಟ್ಟಿ ಮಾಡುವಾಗ ಮನೆಗೋಡೆ ಕುಸಿತ: ಅವಶೇಷಗಳಡಿ ಸಿಲುಕಿದ್ದ ಮಹಿಳೆಯ ರಕ್ಷಣೆ.. ವಿಡಿಯೋ!

ABOUT THE AUTHOR

...view details