ಮೈಸೂರು: ಕಳೆದ 25 ದಿನಗಳಲ್ಲಿ ನಂಜನಗೂಡು ಪಟ್ಟಣದಲ್ಲಿ ಹಾಡಹಗಲೇ ಶಿಕ್ಷಕರ ಮನೆಯಲ್ಲಿ ಕಳ್ಳತನವಾಗಿದ್ದು, ಅದು ಮಾಸುವ ಮುನ್ನವೇ, ಶುಕ್ರವಾರ ಅದೇ ಬಡಾವಣೆಯಲ್ಲಿ ಮತ್ತೊಬ್ಬ ಶಿಕ್ಷಕರ ಮನೆಯಲ್ಲಿ ಕಳ್ಳತನವಾಗಿರುವ ಪ್ರಕರಣ ನಡೆದಿದೆ.
ನಂಜನಗೂಡು ಪಟ್ಟಣದ ರಾಮಸ್ವಾಮಿ ಲೇಔಟ್ನ ಎರಡನೇ ಬ್ಲಾಕ್ನಲ್ಲಿ ವಾಸವಿರುವ ಸೋಮಳ್ಳಿ ಶಾಲೆಯ ಶಿಕ್ಷಕ ಮಾದೇಶ್ ಎಂಬುವರ ಮನೆಯಲ್ಲಿ ನಿನ್ನೆ ರಾತ್ರಿ ಯಾರೂ ಇಲ್ಲದ ಸಮಯ ನೋಡಿ ಕಬ್ಬಿಣದ ಸಲಾಕೆಯಿಂದ ಬಾಗಿಲು ಒಡೆದು ಒಳ ನುಗ್ಗಿರುವ ಕಳ್ಳರು ಸುಮಾರು 65 ಗ್ರಾಂ ಚಿನ್ನಾಭರಣ ಹಾಗೂ ಒಂದೂವರೆ ಸಾವಿರ ನಗದು ಕದ್ದು ಪರಾರಿಯಾಗಿದ್ದಾರೆ. ಮನೆಗೆ ಬೀಗ ಹಾಕಿ ಹೆಂಡತಿಯ ಮನೆಗೆ ಹೋಗಿದ್ದ ಶಿಕ್ಷಕ ಮಾದೇಶ್ ಬೆಳಗ್ಗೆ ಬರುವಷ್ಟರಲ್ಲಿ ಕಳ್ಳರು ಕನ್ನ ಹಾಕಿದ್ದಾರೆ.