ಮೈಸೂರು:ಮಳೆ ನೀರಿನಿಂದ ನೆನೆದು ಶಿಥಿಲಗೊಂಡಿದ್ದ ಮನೆಯೊಂದು ಕುಸಿದು ಬಿದ್ದಿರುವ ಘಟನೆ ಗಾಯಿತ್ರಿಪುರಂನ ಮೊದಲ ಹಂತದಲ್ಲಿ ನಡೆದಿದೆ.
ಮಳೆಯಿಂದ ಶಿಥಿಲಗೊಂಡಿದ್ದ ಮನೆ ಕುಸಿತ : ಅಪಾಯದಿಂದ ಪಾರಾದ ಕುಟುಂಬಸ್ಥರು - ಮಳೆಯಿಂದ ಮನೆ ಕುಸಿತ
ಮಳೆ ನೀರಿನಿಂದ ನೆನೆದು ಶಿಥಿಲಗೊಂಡಿದ್ದ ಮನೆಯೊಂದು ಕುಸಿದು ಬಿದ್ದಿರುವ ಘಟನೆ ಮೈಸೂರಿನ ಗಾಯಿತ್ರಿಪುರಂನ ಮೊದಲ ಹಂತದಲ್ಲಿ ನಡೆದಿದೆ. ಏಳನೇ ಅಡ್ಡರಸ್ತೆಯಲ್ಲಿರುವ ತಿಮ್ಮಯ್ಯ ಎಂಬುವವರ ಹಂಚಿನ ಮನೆಯು ಗುರುವಾರ ಮುಂಜಾನೆ 4 ಗಂಟೆ ಸಮಯದಲ್ಲಿ ಕುಸಿದು ಬಿದ್ದಿದೆ.
ಮಳೆಯಿಂದ ಶಿಥಿಲಗೊಂಡಿದ್ದ ಮನೆ ಕುಸಿತ
ಏಳನೇ ಅಡ್ಡರಸ್ತೆಯಲ್ಲಿರುವ ತಿಮ್ಮಯ್ಯ ಎಂಬುವವರ ಹಂಚಿನ ಮನೆ ಗುರುವಾರ ಮುಂಜಾನೆ 4 ಗಂಟೆ ಸಮಯದಲ್ಲಿ ಕುಸಿದು ಬಿದ್ದಿದೆ. ಈ ಮನೆಯಲ್ಲಿ ತಿಮ್ಮಯ್ಯ ಮತ್ತು ಕುಟುಂಬ ವಾಸವಿತ್ತು. ಮನೆ ಕುಸಿದಿದ್ದರೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ಭಾರಿ ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ಅಕ್ಕ ಪಕ್ಕದವರು ಸ್ಥಳಕ್ಕೆ ಧಾವಿಸಿದ್ದಾರೆ. ಇನ್ನು ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸ್ಥಳೀಯ ಪಾಲಿಕೆ ಸದಸ್ಯರಾದ ಜಿ.ಎಸ್. ಸತ್ಯರಾಜು, ಮನೆಯವರಿಂದ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.