ಕರ್ನಾಟಕ

karnataka

ETV Bharat / state

ಸಂದೇಶ್ ಹೋಟೆಲ್​ನಲ್ಲಿ ಹಲ್ಲೆ ಪ್ರಕರಣ : ಗಂಗಾಧರ್​​ರಿಂದ ಮಾಹಿತಿ ಪಡೆದ ಹೋಟೆಲ್ ಕಾರ್ಮಿಕರ ಸಂಘ - Actor Darshan onslaught on Gangadhar

ಸಪ್ಲೈ ಮಾಡಲು ತಡವಾಗಿದ್ದ ಕಾರಣ ದರ್ಶನ್ ಬೈಯ್ದಿದ್ದಾರೆ ಎಂದು ಗಂಗಾಧರ್ ಮಾಹಿತಿ ನೀಡಿದ್ದಾರೆ ಎಂದರು. ಗಂಗಾಧರ್ ಅವರಿಗೆ ಯಾರು ಬೆದರಿಕೆ ಹಾಕಿದ್ದಾರೆ? ಬೆದರಿಕೆ ಹಾಕಿದ್ದರೆ ಈ ಬಗ್ಗೆ ಪೊಲೀಸರು ತನಿಖೆ ಮಾಡಿ ಸತ್ಯ ಹೊರತರಬೇಕು..

priya ramesh
ರಾಜ್ಯ ಹೋಟೆಲ್ ಕಾರ್ಮಿಕರ ಸಂಘದ ಅಧ್ಯಕ್ಷೆ ಪ್ರಿಯಾ ರಮೇಶ್

By

Published : Jul 16, 2021, 8:29 PM IST

ಮೈಸೂರು :ನಟ ದರ್ಶನ್ ಅವರಿಂದ ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ಗಂಗಾಧರ್ ಅವರಿಂದ ಹೋಟೆಲ್ ಕಾರ್ಮಿಕರ ಸಂಘದ ಸದಸ್ಯರು ಮಾಹಿತಿ ಪಡೆದಿದ್ದಾರೆ.

ಸಂದೇಶ್ ದಿ ಪ್ರಿನ್ಸ್ ನೌಕರರಾದ ಗಂಗಾಧರ್ ಅವರನ್ನು ಭೇಟಿ ಮಾಡಿ, ದರ್ಶನ್ ಹಲ್ಲೆ ಮಾಡಿರುವ ಘಟನೆಯ ಮಾಹಿತಿ ಪಡೆದರು‌‌. ಅಲ್ಲದೇ, ಹೋಟೆಲ್‌ನ ಕೆಲ ಸಿಬ್ಬಂದಿಯಿಂದ ಕೂಡ ಮಾತನಾಡಿಸಿ ಮಾಹಿತಿ ಸಂಗ್ರಹಿಸಿದರು.

ರಾಜ್ಯ ಹೋಟೆಲ್ ಕಾರ್ಮಿಕರ ಸಂಘದ ಅಧ್ಯಕ್ಷೆ ಪ್ರಿಯಾ ರಮೇಶ್

ರಾಜ್ಯ ಹೋಟೆಲ್ ಕಾರ್ಮಿಕರ ಸಂಘದ ಅಧ್ಯಕ್ಷೆ ಪ್ರಿಯಾ ರಮೇಶ್ ಮಾಧ್ಯಮಗಳೊಂದಿಗೆ ಮಾತನಾಡಿ, ನನಗೆ ಯಾರಿಂದಲೂ ಹಲ್ಲೆ ಆಗಿಲ್ಲ. ಸಪ್ಲೈ ಮಾಡಲು ತಡವಾಗಿದ್ದ ಕಾರಣ ದರ್ಶನ್ ಬೈಯ್ದಿದ್ದಾರೆ ಎಂದು ಗಂಗಾಧರ್ ಮಾಹಿತಿ ನೀಡಿದ್ದಾರೆ ಎಂದರು. ಗಂಗಾಧರ್ ಅವರಿಗೆ ಯಾರು ಬೆದರಿಕೆ ಹಾಕಿದ್ದಾರೆ? ಬೆದರಿಕೆ ಹಾಕಿದ್ದರೆ ಈ ಬಗ್ಗೆ ಪೊಲೀಸರು ತನಿಖೆ ಮಾಡಿ ಸತ್ಯ ಹೊರತರಬೇಕು ಎಂದು ಆಗ್ರಹಿಸಿದರು.

ಓದಿ:ವಿಧಾನಸೌಧದ ಕಾರಿಡಾರ್​ನಲ್ಲಿ ಮಾಧ್ಯಮಕ್ಕೆ ನಿರ್ಬಂಧ ; ಸರ್ಕಾರದಿಂದ ಹೊರಬಿತ್ತು ವಿವಾದಾತ್ಮಕ ಆದೇಶ

ABOUT THE AUTHOR

...view details