ಮೈಸೂರು: ವರುಣನ ಅಬ್ಬರಕ್ಕೆ ನಂಜನಗೂಡು ತಾಲೂಕಿನ ವರುಣಾ ವಿಧಾನಸಭಾ ಕ್ಷೇತ್ರದ ಎಸ್. ಹೊಸಕೋಟೆ ಗ್ರಾಮದ ನಾಯಕರ ಹೊಸ ಬಡಾವಣೆ ಮುಳುಗಡೆಯಾಗಿದೆ. ನಿರಂತರವಾಗಿ ಎಡಬಿಡದೆ ಸುರಿಯುತ್ತಿರುವ ಮಳೆಗೆ ಬಡಾವಣೆ ಜಲಾವೃತವಾಗಿದೆ.
ಈಗಾಗಲೇ ಹಲವು ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಮನೆಯೊಳಗೆ ಇರುವ ಕುಟುಂಬಸ್ಥರು ಹೊರ ಬರಲಾರದೆ ಪರದಾಡುತ್ತಿದ್ದಾರೆ. ಮನೆಯಲ್ಲಿದ್ದ ದವಸ ಧಾನ್ಯಗಳು ಹಾಗೂ ಇನ್ನಿತರ ವಸ್ತುಗಳು ನಾಶವಾಗಿದ್ದು, ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಳೆ ಆರ್ಭಟಕ್ಕೆ ಹೊಸಕೋಟೆ ಗ್ರಾಮ ಜಲಾವೃತ ಇನ್ನು, ರೈತರ ಗದ್ದೆಗಳು ಮುಳುಗಡೆಯಾಗಿದ್ದು, ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಫಸಲು ನಾಶವಾಗಿದೆ. ತಾಲೂಕು ಆಡಳಿತ ಎಚ್ಚೆತ್ತುಕೊಂಡು ಗ್ರಾಮಸ್ಥರ ನೆರವಿಗೆ ಧಾವಿಸಿ ಬಡಾವಣೆ ನಿವಾಸಿಗಳಿಗೆ ಗಂಜಿ ಕೇಂದ್ರ ತೆರೆಯಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ. ಮಳೆಗೆ ನಾಶವಾದ ಫಸಲಿಗೆ ಪರಿಹಾರ ನೀಡಬೇಕು ಎಂದು ರೈತ ಪಾಪಣ್ಣ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಮೈಸೂರು : ಭಾರಿ ಮಳೆಗೆ ಕುಸಿದ ಐದು ಮನೆಗಳು, ಬಾಣಂತಿ ಸ್ವಲ್ಪದರಲ್ಲೇ ಪಾರು