ಮೈಸೂರು:ನಗರದ ಕರ್ಜನ್ ಪಾರ್ಕ್ನಲ್ಲಿ ತೋಟಗಾರಿಕೆ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಮಾವು ಹಾಗೂ ಹಲಸು ಹಣ್ಣಿನ ಮೇಳವನ್ನು ಏರ್ಪಡಿಸಲಾಗಿತ್ತು.
ಮಾವು ಹಾಗೂ ಹಲಸು ಮೇಳ... ರೈತರಿಂದ ನೇರ ಗ್ರಾಹಕರಿಗೆ ನೈಸರ್ಗಿಕ ಹಣ್ಣು - undefined
ನಗರದ ಕರ್ಜನ್ ಪಾರ್ಕ್ನಲ್ಲಿ ತೋಟಗಾರಿಕೆ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಮಾವು ಹಾಗೂ ಹಲಸು ಹಣ್ಣಿನ ಮೇಳವನ್ನು ಏರ್ಪಡಿಸಲಾಗಿದ್ದು, ಈ ಮೇಳೆದಲ್ಲಿ ಸುಮಾರು 40ಕ್ಕೂ ಹೆಚ್ಚು ಮಾವಿನ ಹಣ್ಣಿನ ಮಳಿಗೆಗಳನ್ನು ಹಾಕಲಾಗಿತ್ತು.
ನಗರದ ಕರ್ಜನ್ ಪಾರ್ಕ್ನಲ್ಲಿ ತೋಟಗಾರಿಕೆ ಇಲಾಖೆ ಏರ್ಪಡಿಸಿದ್ದ ಮೇಳಕ್ಕೆ ಜಿಪಂ ಸಿಇಒ ಜ್ಯೋತಿ ಚಾಲನೆ ನೀಡಿದರು. ಮೇಳದಲ್ಲಿ ಬಾದಾಮಿ, ಬಂಗನಪಲ್ಲಿ, ರಸಪೂರಿ, ಮಲ್ಲಿಕಾ, ಸೆಂಧೂರ, ಮಲಗೋವಾ, ತೋತಾಪುರಿ, ನೀಲಂ, ಆಮ್ರಪಾಲಿ, ಕೇಸರ್, ದಶೇರಿ ಇತ್ಯಾದಿ ಮಾವಿನ ತಳಿಗಳನ್ನು ಇಡಲಾಗಿತ್ತು. ಸುಮಾರರು 40 ಮಾವಿನ ಹಣ್ಣಿನ ಮಳಿಗೆಗಳು, ಎರಡು ಹಲಸಿನ ಮಳಿಗೆಗಳು ಮೇಳದಲ್ಲಿದ್ದವು. ಈ ಮೇಳದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಲವು ವ್ಯಾಪರಿಗಳು ಭಾಗವಹಿಸಿದ್ದರು.
ರೈತರಿಂದ ನೈಸರ್ಗಿಕ ಮಾವುಗಳನ್ನು ಮಾರಾಟ ಮಾಡುವುದರಿಂದ ಗ್ರಾಹಕರಿಗೂ ಹಾಗೂ ರೈತರಿಗೆ ಅನುಕೂಲವಾಗಲಿದೆ. ಇಲ್ಲಿ ನೇರವಾಗಿ ಮಾರಾಟ ಆಗುವುದರಿಂದ ಯಾವುದೇ ಮಧ್ಯವರ್ತಿಗಳ ಕಾಟ ಇರುವುದಿಲ್ಲ. ಇದು ವರ್ಷಕ್ಕೆ ಒಮ್ಮೆ ಬೆಳೆಯುವ ಬೆಳೆಯಾಗಿದ್ದು, ಕೆಲವೊಂದು ಮಾವಿನ ತಳಿಗೆ ಒಂದೆರಡು ರೂಪಾಯಿ ಹೆಚ್ಚಿರುತ್ತದೆ ಅಷ್ಟೇ. ಈ ಮೇಳದಲ್ಲಿ ಭಾಗವಹಿಸಿ ಸಂತೋಷವಾಯಿತು ಎಂದು 'ಈಟಿವಿ ಭಾರತ್'ನೊಂದಿಗೆ ತಮ್ಮ ಅಭಿಪ್ರಾಯವನ್ನು ವ್ಯಾಪಾರಿ ಲೋಕೇಶ್ ಹಂಚಿಕೊಂಡರು.