ಕರ್ನಾಟಕ

karnataka

ETV Bharat / state

ಸುಡು ಬೇಸಿಗೆಯಲ್ಲಿಯೂ ಮೈಸೂರು ಮೃಗಾಲಯದ ಪ್ರಾಣಿಗಳು ಕೂಲ್ ಕೂಲ್​​! - ಮೈಸೂರು ಮೃಗಾಲಯ

ಮೈಸೂರಿನಲ್ಲಿ ಬಿಸಿಲ ಝಳ ಹೆಚ್ಚಾಗಿದ್ದು, ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿರುವ ಪ್ರಾಣಿಗಳನ್ನು ಬಿಸಿಲಿನಿಂದ ರಕ್ಷಿಸಲು ಸ್ಪ್ರಿಂಕ್ಲರ್ ಮುಖಾಂತರ ನೀರು ಚಿಮ್ಮಿಸಿ ತಂಪು ಮಾಡಲಾಗುತ್ತಿದೆ.

Mysore Zoo
ಮೃಗಾಲಯ

By

Published : Mar 18, 2021, 4:09 PM IST

ಮೈಸೂರು: ಸುಡು ಬೇಸಿಗೆಯಲ್ಲಿಯೂ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದ ಪ್ರಾಣಿಗಳು ಕೂಲ್ ಆಗಿ, ಲವಲವಿಕೆಯಿಂದ ಪ್ರವಾಸಿಗರಿಗೆ ಮುದು ನೀಡುತ್ತಿವೆ.

ಹೌದು, ನಗರದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಮೃಗಾಲಯದಲ್ಲಿರುವ ಪ್ರಾಣಿ-ಪಕ್ಷಿಗಳ ಹಿತದೃಷ್ಟಿಯಿಂದ ಅವುಗಳು ಇರುವ ಸ್ಥಳಗಳನ್ನು ತಂಪಾಗಿಸುವ ಮೂಲಕ ಪ್ರಾಣಿಗಳನ್ನು ಕೂಲ್​ ಆಗಿ ಇಡುವ ಕಾರ್ಯವನ್ನು ಮೃಗಾಲಯ ಸಿಬ್ಬಂದಿ ಮಾಡುತ್ತಿದ್ದಾರೆ.

ಸುಡು ಬೇಸಿಗೆಯಲ್ಲಿಯೂ ಮೃಗಾಲಯ ಪ್ರಾಣಿಗಳು ಕೂಲ್ ಕೂಲ್ !

ಮೃಗಾಲಯದಲ್ಲಿ ಇರುವ ಪ್ರಾಣಿ-ಪಕ್ಷಿಗಳಿಗೆ ಬೇಸಿಗೆ ಬಿಸಿಲಿನಿಂದ ರಕ್ಷಣೆ ನೀಡಲು ಪ್ರಾಣಿಗಳಿಗೆ ವಿಶೇಷವಾಗಿ ನೀರು ಸಿಂಪಡಣೆ, ವಿಶೇಷ ಆಹಾರ, ಐಸ್ ಕ್ರೀಮ್ ಮಿಶ್ರಿತ ಹಣ್ಣು ಮತ್ತು ತರಕಾರಿ ಹಾಗೂ ಚಿಂಪಾಂಜಿಗಳಿಗೆ ಎಳನೀರಿನ ವ್ಯವಸ್ಥೆ ಮಾಡಲಾಗಿದೆ.

ಬಿಸಿಲಿನಿಂದ ಮೃಗಾಲಯದ ಪ್ರಾಣಿಗಳ ರಕ್ಷಣೆಗೆ ಕೆಲವು ನೂತನ ವಿಧಾನಗಳನ್ನು ಅನುಸರಿಸಲಾಗುತ್ತಿದೆ ಎಂದು ಮೃಗಾಲಯದ ನಿರ್ದೇಶಕ ಅಜೀತ್ ಕುಲಕರ್ಣಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ABOUT THE AUTHOR

...view details