ಮೈಸೂರು:ಶಾಸಕರ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಹಶೀಲ್ದಾರ್ಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಶಾಸಕರು ಮತ್ತು ಅಧಿಕಾರಿಗಳಿಗೆ ಕ್ವಾರಂಟೈನ್ ವಿಧಿಸಲಾಗಿದೆ.
ಕೆ.ಆರ್.ನಗರ ಶಾಸಕರು ಸೇರಿ 20 ಅಧಿಕಾರಿಗಳು ಹೋಮ್ ಕ್ವಾರಂಟೈನ್ - ಮೈಸೂರು ಶಾಸಕರು ಸೇರಿದಂತೆ 20 ಮಂದಿ ಕ್ವಾರಂಟೈನ್ ಸುದ್ದಿ
ಶಾಸಕ ಸಾ.ರಾ.ಮಹೇಶ್ ಕೊರೊನಾ ಸೋಂಕಿತರ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಜೊತೆ ಆ ಪ್ರದೇಶಗಳಿಗೆ ಕೆ.ಆರ್.ನಗರ ತಹಶೀಲ್ದಾರ್, ಭೇಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇವರನ್ನೆಲ್ಲ ಕ್ವಾರಂಟೈನ್ ಮಾಡಲಾಗಿದೆ.
ಶಾಸಕ ಸಾ.ರಾ.ಮಹೇಶ್ ಕೊರೊನಾ ಸೋಂಕಿತರ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಜೊತೆ ಆ ಪ್ರದೇಶಗಳಿಗೆ ಕೆ.ಆರ್.ನಗರ ತಹಶೀಲ್ದಾರ್, ಭೇಟಿ ನೀಡಿದ್ದರು. ತಹಶೀಲ್ದಾರ್ ಅವರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ತಾಲೂಕಿನ ಶಾಸಕರಾದ ಸಾ.ರಾ.ಮಹೇಶ್, ಸರ್ಕಲ್ ಇನ್ಸ್‌ಪೆಕ್ಟರ್ ಹಾಗೂ ಇತರ 20 ಮಂದಿಗೆ ಹೋಮ್ ಕ್ವಾರಂಟೈನ್ ನಲ್ಲಿ ಇರಲು ಸೂಚಿಸಲಾಗಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಮಹೇಂದ್ರಪ್ಪ ತಿಳಿಸಿದ್ದಾರೆ.
ಶಾಸಕರು ಮತ್ತು ಈ ಎಲ್ಲ ಅಧಿಕಾರಿಗಳ ಗಂಟಲು ದ್ರವ ಮಾದರಿ ಪರೀಕ್ಷೆಯನ್ನು ಶೀಘ್ರವಾಗಿ ಮಾಡಲಾಗುವುದು ಎಂದು ಅವರು ಇದೆ ಸಂದರ್ಭದಲ್ಲಿ ತಿಳಿಸಿದರು.