ಕರ್ನಾಟಕ

karnataka

ತ್ರಿವೇಣಿ ಸಂಗಮದಲ್ಲಿ ಭಕ್ತರ ಪುಣ್ಯಸ್ನಾನಕ್ಕೆ ಕುತ್ತು ತಂದ ಕೊರೊನಾ!

ತ್ರಿವೇಣಿ ಸಂಗಮದಲ್ಲಿ ಯುಗಾದಿಯಂದು ಭಕ್ತರು ಪುಣ್ಯಸ್ನಾನ ಮಾಡಿ ಹಬ್ಬ ಆಚರಿಸುವ ಪದ್ಧತಿ ಇತ್ತು. ಆದರೆ, ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ಸಂಪೂರ್ಣ ಲಾಕ್​​​ಡೌನ್​ ಆದೇಶ ಜಾರಿಯಾಗಿದೆ. ತ್ರಿವೇಣಿ ಸಂಗಮಕ್ಕೆ ಭಕ್ತರ ಭೇಟಿಗೆ ನಿಷೇಧವಿದೆ.

By

Published : Mar 25, 2020, 10:26 AM IST

Published : Mar 25, 2020, 10:26 AM IST

Holy bath hold in Triveni sangama to devotees aware of corona
ತ್ರಿವೇಣಿ ಸಂಗಮದಲ್ಲಿ ಭಕ್ತರ ಪುಣ್ಯಸ್ನಾನಕ್ಕೆ ಕುತ್ತು ತಂದ ಕೊರೊನಾ..!

ಮೈಸೂರು :ಯುಗಾದಿ ಹಬ್ಬದಂದು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಲು ಕಾತುರದಿಂದ ಕಾಯುತ್ತಿದ್ದ ಭಕ್ತರಿಗೆ ಕೊರೊನಾ ವೈರಸ್ ಸಂಗಮದಿಂದಲ್ಲೇ ದೂರ ಇರುವಂತೆ ಮಾಡಿದೆ. ಕೊರೊನಾ ವೈರಸ್ ಹಿನ್ನೆಲೆ ದೇಶದಾದ್ಯಂತ ಮಂಗಳವಾರ ರಾತ್ರಿಯಿಂದಲೇ ಲಾಕ್​​ಡೌನ್ ಜಾರಿಯಾಗಿದೆ. ಯುಗಾದಿ ಸಂಭ್ರಮದಲ್ಲಿದ್ದ ಜನರಿಗೆ ಭಾರಿ ನಿರಾಸೆಯಾಗಿದೆ.

ತ್ರಿವೇಣಿ ಸಂಗಮದಲ್ಲಿ ಭಕ್ತರ ಪುಣ್ಯಸ್ನಾನಕ್ಕೆ ಕುತ್ತು ತಂದ ಕೊರೊನಾ..!

ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ತ್ರಿವೇಣಿ ಸಂಗಮದಲ್ಲಿ ಯುಗಾದಿ ಹಬ್ಬದಂದು ಲಕ್ಷಾಂತರ ಭಕ್ತರು ಪುಣ್ಯಸ್ನಾನ ಮಾಡಿ ನಂತರ ಮನೆಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದರು. ದೇಶಾದ್ಯಂತ ಲಾಕ್​ಡೌನ್ ಇರುವುದರಿಂದ ಗುಂಪು ಗುಂಪಾಗಿ ಸಾರ್ವಜನಿಕರು ಸೇರುವಂತಿಲ್ಲ.‌ ಆದರೆ, ಇದರ ಮಧ್ಯೆ ಭಕ್ತಾಧಿಗಳು ಆಗಮಿಸುವ ನಿರೀಕ್ಷೆ ಹಿನ್ನೆಲೆ ದೇವಾಲಯದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್​ ಮಾಡಲಾಗಿದೆ.

ABOUT THE AUTHOR

...view details