ಕರ್ನಾಟಕ

karnataka

ETV Bharat / state

ಇತಿಹಾಸ ಪ್ರಸಿದ್ಧ ಸುತ್ತೂರು ಜಾತ್ರೆ: ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಇಂದು ಚಾಲನೆ

ಇತಿಹಾಸ ಪ್ರಸಿದ್ಧ ಸುತ್ತೂರು ಜಾತ್ರಾ ಮಹೋತ್ಸವಕ್ಕೆ ಹಲವಾರು ಗಣ್ಯರ ಸಂಮುಖದಲ್ಲಿ ಅಧಿಕೃತ ಚಾಲನೆ ಸಿಗಲಿದೆ.

History famous suttru fair, History famous suttru fair begins today, History famous suttru fair begins today in mysore, History famous suttru fair news, ಇತಿಹಾಸ ಪ್ರಸಿದ್ಧ ಸುತ್ತೂರು ಜಾತ್ರೆ, ಇತಿಹಾಸ ಪ್ರಸಿದ್ಧ ಸುತ್ತೂರು ಜಾತ್ರೆ ಇಂದು ಆರಂಭ, ಮೈಸೂರಿನಲ್ಲಿ ಇತಿಹಾಸ ಪ್ರಸಿದ್ಧ ಸುತ್ತೂರು ಜಾತ್ರೆ ಇಂದು ಆರಂಭ, ಇತಿಹಾಸ ಪ್ರಸಿದ್ಧ ಸುತ್ತೂರು ಜಾತ್ರೆ ಸುದ್ದಿ,
ಇಂದು ಸುತ್ತೂರು ಜಾತ್ರೆಗೆ ಚಾಲನೆ

By

Published : Jan 21, 2020, 10:19 AM IST

ಮೈಸೂರು:ಇತಿಹಾಸ ಪ್ರಸಿದ್ಧ ಸುತ್ತೂರು ಜಾತ್ರಾ ಮಹೋತ್ಸವ ಇಂದಿನಿಂದ 6 ದಿನಗಳ ಕಾಲ ನಡೆಯಲಿದ್ದು, ಜಾತ್ರಾ ಮಹೋತ್ಸವಕ್ಕೆ ಸಂಜೆ 4 ಗಂಟೆಗೆ ಗಣ್ಯರಿಂದ ಚಾಲನೆ ಸಿಗಲಿದೆ.

ಇಂದು ಸುತ್ತೂರು ಜಾತ್ರೆಗೆ ಚಾಲನೆ

ಹಳೇ ಮೈಸೂರು ಭಾಗದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಸುತ್ತೂರು ಜಾತ್ರಾ ಮಹೋತ್ಸವ ಇಂದಿನಿಂದ ಜನವರಿ 26 ವರೆಗೆ ನಡೆಯಲಿದೆ. ಈ ಜಾತ್ರಾ ಮಹೋತ್ಸವ ಭಾವೈಕ್ಯದ ಜೊತೆಗೆ ಕಲೆ, ಸಾಹಿತ್ಯ , ಕೃಷಿ ವಸ್ತು ಪ್ರದರ್ಶನ, ದಾಸೋಹದ ಜೊತೆಗೆ ಸಾಂಸ್ಕೃತಿಕ ಮೇಳ, ದೇಶಿಯ ಆಟಗಳು, ದೋಣಿ ವಿಹಾರ ರಂಗೋಲಿ ಸ್ಪರ್ಧೆ ಸೇರಿದಂತೆ ಹಲವಾರು ಗ್ರಾಮೀಣ ಕ್ರೀಡೆಗಳಿಗೂ ಈ ಜಾತ್ರೆ ವೇದಿಕೆಯಾಗಲಿದೆ.

ಇಂದು ಸುತ್ತೂರು ಜಾತ್ರೆಗೆ ಚಾಲನೆ
ಇಂದು ಸುತ್ತೂರು ಜಾತ್ರೆಗೆ ಚಾಲನೆ

ಈ ಜಾತ್ರೆ ಇಂದು ಉದ್ಘಾಟನೆಯಾಗಲಿದ್ದು, ನಿನ್ನೆ ಸುತ್ತೂರು ಶ್ರೀಗಳಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು ಗದ್ದಿಗೆಗೆ ಪೂಜೆ ಸಲ್ಲಿಸಿ ಅನ್ನ ದಾಸೋಹಕ್ಕೆ ಚಾಲನೆ ನೀಡಿದರು.

ಇಂದು ಸುತ್ತೂರು ಜಾತ್ರೆಗೆ ಚಾಲನೆ
ಇಂದು ಸುತ್ತೂರು ಜಾತ್ರೆಗೆ ಚಾಲನೆ

ಇಂದು ಬೆಳಗ್ಗೆ ಗದ್ದಿಗೆಯಲ್ಲಿ ವಿಶೇಷ ಪೂಜೆ ಮಾಡುವ ಮೂಲಕ ಜಾತ್ರೆಯ ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡಿದ್ದು, ಸಂಜೆ 4 ಗಂಟೆಗೆ ಕೇಂದ್ರದ ಮಾಜಿ ಸಚಿವರಾದ ವೀರಪ್ಪ ಮೊಯ್ಲಿ, ರಾಜ್ಯದ ಡಿಸಿಎಂ ಗೋವಿಂದ ಕಾರಜೋಳ, ಸಚಿವ ಮಾಧುಸ್ವಾಮಿ ಬಿಜಿಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಹಲವಾರು ಗಣ್ಯರ ಸಂಮುಖದಲ್ಲಿ ಜಾತ್ರೆಗೆ ಅಧಿಕೃತ ಚಾಲನೆ ಸಿಗಲಿದೆ.

ಇಂದು ಸುತ್ತೂರು ಜಾತ್ರೆಗೆ ಚಾಲನೆ

ಈ ಭಾರೀ ಜನಸ್ತೋಮ ಸೇರುವುದರಿಂದ ಬಿಗಿ ಪೋಲಿಸ್ ಬಂದುಬಸ್ತ್ ಏರ್ಪಡಿಸಲಾಗಿದೆ.

ABOUT THE AUTHOR

...view details