ನಾಲ್ವಡಿಯವರಿಗೆ ಸರಿಸಮಾನವಾಗಿ ವಿಶ್ವೇಶ್ವರಯ್ಯ ಪ್ರತಿಮೆ ಬೇಡ: ಇತಿಹಾಸ ತಜ್ಞ - ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಸರಿಸಮಾನವಾಗಿ ಸರ್.ಎಂ.ವಿಶ್ವೇಶ್ವರಯ್ಯ ರ ಪ್ರತಿಮೆ
ಸರ್ ಎಂ. ವಿಶ್ವೇಶ್ವರಯ್ಯ ತಮ್ಮ ಜೀವಿತಾವಧಿಯಲ್ಲಿ ತಾಂತ್ರಿಕತೆಯ ಅಭಿವೃದ್ಧಿಯೊಂದಿಗೆ ರಾಜ್ಯವನ್ನು ಉನ್ನತ ಸ್ಥರದತ್ತ ಕೊಂಡೊಯ್ದಿದ್ದರು. ಹಾಗೆಯೇ ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ಆಡಳಿತಾವಧಿಯಲ್ಲಿ ಉನ್ನತ ಸೌಲಭ್ಯಗಳನ್ನ ಒದಗಿಸಿದ್ದರು. ರಾಜ್ಯಕ್ಕೆ ಇವರಿಬ್ಬರ ಕೊಡುಗೆ ಅಪಾರವಾಗಿರುವಂತದ್ದು. ಆದ್ರೀಗ ಇವರಿಬ್ಬರ ಪ್ರತಿಮೆ ವಿಚಾರಕ್ಕೆ ವಿವಾದ ಹುಟ್ಟಿಕೊಂಡಿದೆ.
ಇತಿಹಾಸ ತಜ್ಞ 'ನಂಜರಾಜ ಅರಸು
ಮೈಸೂರು: ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಸರಿಸಮಾನವಾಗಿ ಸರ್.ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆ ಬೇಡವೆಂದು ಅರಸು ಮನೆತನದ ಮುಖಂಡರು ಇಂದು ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು.
ಜೊತೆಗೆ ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಅವರ ಹೆಸರಿಡಬೇಕೆಂದು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ವಾಪಸ್ ಕಳುಹಿಸಿದೆ. ಇದನ್ನು ಮರು ಪರಿಶೀಲನೆ ಮಾಡಬೇಕೆಂದು ಇದೇ ಸಂದರ್ಭದಲ್ಲಿ ನಂಜರಾಜು ಒತ್ತಾಯಿಸಿದರು.