ಕರ್ನಾಟಕ

karnataka

ETV Bharat / state

ಉಗ್ರರ ಕರಿನೆರಳು... ಮೈಸೂರಲ್ಲೂ ಹೈ ಅಲರ್ಟ್! - Mysore palace

370 ನೇ ವಿಧಿ ರದ್ದುಪಡಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಉಗ್ರರು ದೇಶದ ಪ್ರಮುಖ ನಗರಗಳಲ್ಲಿ ದಾಳಿ ನಡೆಸುವ ಸಾಧ್ಯತೆಯ ಹಿನ್ನೆಲೆ ಪೊಲೀಸರು ವ್ಯಾಪಕ ತಪಾಸಣೆ ಹಾಗೂ ಬಿಗಿ ಬಂದೋಬಸ್ತ್ ನಿಯೋಜಿಸಿದ್ದಾರೆ

ಮೈಸೂರುನಲ್ಲಿ ಹೈ ಅಲರ್ಟ್

By

Published : Aug 17, 2019, 1:05 PM IST

ಮೈಸೂರು: ‌ಉಗ್ರರ ದಾಳಿ ನಡೆಯುವ ಸಾಧ್ಯತೆ ಇದೆ ಎಂಬ ಗುಪ್ತಚರ ಇಲಾಖೆಯ ಮಾಹಿತಿಯ ಮೇರೆಗೆ ನಗರದಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ.

370 ನೇ ವಿಧಿ ರದ್ದುಪಡಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಉಗ್ರರು ದೇಶದ ಪ್ರಮುಖ ನಗರಗಳಲ್ಲಿ ದಾಳಿ ನಡೆಸುವ ಸಾಧ್ಯತೆಯ ಹಿನ್ನೆಲೆ ಪೋಲಿಸರು ವ್ಯಾಪಕ ತಪಾಸಣೆ ಹಾಗೂ ಬಿಗಿ ಬಂದೋಬಸ್ತ್ ನಿಯೋಜಿಸಿದ್ದಾರೆ.

ಮೈಸೂರಲ್ಲಿ ಹೈ ಅಲರ್ಟ್

ನಗರದ ಅರಮನೆ, ಚಾಮರಾಜೇಂದ್ರ ಮೃಗಾಲಯ, ಚಾಮುಂಡಿ ಬೆಟ್ಟ, ಸೆಂಟ್ ಫಿಲೋಮಿನಾ ಚರ್ಚ್, ಸಿಎಫ್​ಟಿಆರ್​ಐ, ಡಿಎಫ್​ಆರ್​ಎಲ್, ಬಸ್ ನಿಲ್ದಾಣ, ವಿಮಾನ ನಿಲ್ದಾಣಗಳು‌ ಸೇರಿದಂತೆ ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಿಲಾಗಿದೆ. ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ, ಶಸ್ತ್ರಾಸ್ತ್ರ ಮೀಸಲು ಪಡೆಯನ್ನು ಸಹ ನೇಮಿಸಲಾಗಿದೆ.

ತಪಾಸಣೆ ವೇಳೆ ಯಾವುದೇ ಅನುಮಾನಾಸ್ಪದ ವಸ್ತುಗಳು ಸಿಕ್ಕಿಲ್ಲ. ಇದೇ ರೀತಿ ಕಟ್ಟೆಚ್ಚರವನ್ನು ಮುಂದುವರೆಸಲಾಗುವುದು ಎಂದು ಎಸಿಪಿ ಮುತ್ತುರಾಜು ತಿಳಿಸಿದರು.

ABOUT THE AUTHOR

...view details