ಮೈಸೂರು : ಇಲ್ಲಿನ ಹಾಲಾಳು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಡಾ. ವಿಷ್ಣುವರ್ಧನ್ ಸ್ಮಾರಕಕ್ಕೆ ವಿಷ್ಣುವರ್ಧನ್ ಪುತ್ರಿ ಕೀರ್ತಿ,ಅಳಿಯ ಅನಿರುದ್ಧ್ ಹಾಗೂ ಹಿರಿಯ ನಟಿ ಹೇಮಚೌಧರಿ ಪೂಜೆ ಸಲ್ಲಿಸಿದರು.
ವಿಷ್ಣುದಾದ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಹೇಮಚೌಧರಿ- ಅನಿರುದ್ಧ್ - Latest News For Anirud
ಮೈಸೂರು ,ಇಲ್ಲಿನ ಹಾಲಾಳು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಡಾ. ವಿಷ್ಣುವರ್ಧನ್ ಸ್ಮಾರಕಕ್ಕೆ ವಿಷ್ಣುವರ್ಧನ್ ಪುತ್ರಿ ಕೀರ್ತಿ, ಅಳಿಯ ಅನಿರುದ್ಧ್ ಹಾಗೂ ಹಿರಿಯ ನಟಿ ಹೇಮಚೌದರಿ ಪೂಜೆ ಸಲ್ಲಿಸಿದರು.
ವಿಷ್ಣುದಾದ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಹೇಮಚೌದರಿ- ಅನಿರುದ್ಧ್
ನಂತರ ಮಾಧ್ಯಮಗಳೊಂದಿಗೆ ಮಾತಮಾಡಿದ ಹಿರಿಯ ನಟಿ ಹೇಮಚೌಧರಿ, ವಿಷ್ಣುವರ್ಧನ್ ಅವರೊಂದಿಗೆ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದೇನೆ. ಅವರದು ನಿಷ್ಕಲ್ಮಶ ಮನಸ್ಸು ಎಲ್ಲರನ್ನು ಪ್ರೀತಿಸುತ್ತಿದ್ದರು. ಆದರೆ ಹತ್ತು ವರ್ಷಗಳ ಕಾಲ ಅವರ ಸ್ಮಾರಕ ನಿರ್ಮಾಣ ಮಾಡಲು ಸಮಯವಾಗದೇ ಇರುವುದು ಬೇಸರ ತಂದಿದೆ ಎಂದರು.
ವಿಷ್ಣುವರ್ಧನ್ ಅಳಿಯ ಹಾಗೂ ನಟ ಅನಿರುದ್ಧ್ ಅವರು ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿ, ಹತ್ತು ವರ್ಷಗಳಿಂದ ಇದ್ದ ಅಡೆತಡೆಗಳು ನಿವಾರಣೆಯಾಗಿದೆ. ವಿಷ್ಣುವರ್ಧನ್ ಅವರ ಸ್ಮಾರಕ ಕಾರ್ಯ ತ್ವರಿತಗತಿ ನಡೆಯಲಿದೆ ಎಂದು ತಿಳಿಸಿದರು.