ಕರ್ನಾಟಕ

karnataka

ETV Bharat / state

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲೂ ಅಬ್ಬರದ ಮಳೆ: ದಮ್ಮನಕಟ್ಟೆ ಸಫಾರಿ ಸ್ಥಗಿತ - nagarahole

ಮೈಸೂರಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಅಧಿಕ ಮಳೆಯಾಗುತ್ತಿದ್ದು, ದಮ್ಮನಕಟ್ಟೆ ಸಫಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಂತರಸಂತೆಯ ಆರ್​ಎಫ್ಓ ವಿನಯ್ ತಿಳಿಸಿದ್ದಾರೆ.

ದಮ್ಮನಕಟ್ಟೆ ಸಫಾರಿ ಸ್ಥಗಿತ

By

Published : Aug 9, 2019, 2:10 PM IST

ಮೈಸೂರು:ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಅಧಿಕ ಮಳೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ದಮ್ಮನಕಟ್ಟೆ ಸಫಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ದಮ್ಮನಕಟ್ಟೆ ಸಫಾರಿ ಸ್ಥಗಿತ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ 125 ಮಿ.ಮೀಟರ್ ದಾಖಲೆಯ ಮಳೆಯಾಗುತ್ತಿದ್ದು, ಇದರಿಂದ ಅರಣ್ಯ ಪ್ರದೇಶದಲ್ಲಿ ಎಲ್ಲಾ ಕಡೆ ನೀರು ತುಂಬಿದೆ. ಆದ್ದರಿಂದ ದಮ್ಮನಕಟ್ಟೆ ಸಫಾರಿ ಕೇಂದ್ರದಿಂದ ಸಫಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಂತರಸಂತೆಯ ಆರ್​ಎಫ್ಓ ವಿನಯ್ ತಿಳಿಸಿದ್ದಾರೆ. ಸಾಧ್ಯವಾದಷ್ಟು ಪ್ರವಾಸಿಗರು ಇಲ್ಲಿಗೆ ಬರದಂತೆ ಮನವಿಯನ್ನೂ ಮಾಡಿದ್ದಾರೆ.

ದಾಖಲೆ ಮಳೆ:
ಬಂಡೀಪುರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಕಳೆದ 30 ವರ್ಷಗಳಿಂದ ಈ ರೀತಿಯಲ್ಲಿ ಮಳೆಯಾಗದೆ ದಾಖಲೆ ಸೃಷ್ಟಿ ಮಾಡಿದೆ. ಇದರಿಂದ ನಾಗರಹೊಳೆ ಹಾಗೂ ಬಂಡೀಪುರ ವ್ಯಾಪ್ತಿಯ ನಗು ಹಾಗೂ ತಾರಕ ಜಲಾಶಯವೂ ಕೂಡ ತುಂಬಿದೆ.

ABOUT THE AUTHOR

...view details