ಮೈಸೂರು:ಮೈಸೂರು ಜಿಲ್ಲೆಯಾದ್ಯಂತ ನಿನ್ನೆ ಸಂಜೆ ಧಾರಾಕಾರ ಮಳೆಯಾಗಿದ್ದು, ಮುಂಗಾರು ಆರಂಭಕ್ಕೂ ಮುನ್ನವೇ ರೈತರಲ್ಲಿ ಮಂದಹಾಸ ಮೂಡಿದೆ.
ಜಿಲ್ಲೆಯಾದ್ಯಂತ ಧಾರಾಕಾರ ಮಳೆ, ರೈತರಲ್ಲಿ ಮೂಡಿದ ಮುಂಗಾರಿನ ಹರ್ಷ! - ಮೈಸೂರು ಮಳೆ,
ಮೈಸೂರು ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗಿದ್ದು, ರೈತರಲ್ಲಿ ಮೊಗದಲ್ಲಿ ಮಂದಹಾಸ ಮೂಡಿದೆ.
![ಜಿಲ್ಲೆಯಾದ್ಯಂತ ಧಾರಾಕಾರ ಮಳೆ, ರೈತರಲ್ಲಿ ಮೂಡಿದ ಮುಂಗಾರಿನ ಹರ್ಷ! Heavy rain, Heavy rain in Mysore, Mysore Heavy rain, Mysore Heavy rain news, ಭಾರಿ ಮಳೆ, ಮೈಸೂರಿನಲ್ಲಿ ಭಾರಿ ಮಳೆ, ಮೈಸೂರು ಮಳೆ, ಮೈಸೂರು ಮಳೆ ಸುದ್ದಿ,](https://etvbharatimages.akamaized.net/etvbharat/prod-images/768-512-11407078-876-11407078-1618444801611.jpg)
ರೈತರಲ್ಲಿ ಮೂಡಿದ ಮುಂಗಾರಿನ ಹರ್ಷ
ರೈತರಲ್ಲಿ ಮೂಡಿದ ಮುಂಗಾರಿನ ಹರ್ಷ
ಮೈಸೂರು ತಾಲ್ಲೂಕು, ತಿ.ನರಸೀಪುರ ತಾಲ್ಲೂಕಿನಲ್ಲಿ ಸಾಧಾರಣ ಮಳೆಯಾದರೆ, ಹುಣಸೂರು, ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ನಂಜನಗೂಡು, ಸರಗೂರು ತಾಲ್ಲೂಕಿನಲ್ಲಿ ಧಾರಾಕಾರ ಮಳೆಯಾಗಿದೆ.
ಜಿಲ್ಲೆಯಾದ್ಯಂತ ಸುಮಾರು ಒಂದೂವರೆ ಗಂಟೆಗಳ ಕಾಲ ಮಳೆ ಸುರಿದಿದ್ದು, 20 ರಿಂದ 25 ಮಿಮಿ ಮಳೆಯಾಗಿದೆ. ಮುಂಗಾರು ಆರಂಭಕ್ಕೂ ಮುನ್ನವೇ ಯುಗಾದಿ ಸಂವತ್ಸರದಲ್ಲಿಯೇ ಮಳೆ ಆರಂಭವಾಗುತ್ತಿರುವುದು ರೈತರಲ್ಲಿ ಮಂದಹಾಸ ಮೂಡಿದೆ.