ಮೈಸೂರು: ಜಂಬೂಸವಾರಿ ನಂತರ ಮಳೆ ಬಂದರೆ ಮುಂದಿನ ವರ್ಷ ನಾಡಿನಲ್ಲಿ ಸುಭೀಕ್ಷವಾಗಿ ಮಳೆಯಾಗುತ್ತದೆ ಎಂಬ ನಂಬಿಕೆಯಂತೆ ಈ ಬಾರಿ ಜಂಬೂಸವಾರಿ ಮೆರವಣಿಗೆ ನಂತರ ಮಳೆ ಬಂದಿದೆ. ಪ್ರತಿವರ್ಷದಂತೆ ಈ ವರ್ಷವೂ ನಂಬಿಕೆ ಸತ್ಯವಾಗಿದೆ.
ಅಂಬಾರಿ ಅರಮನೆ ಸೇರುತ್ತಿದ್ದಂತೆ ಧರೆಗಿಳಿದ ವರುಣ ಅಂಬಾರಿ ಅರಮನೆ ಸೇರುತ್ತಿದ್ದಂತೆ ಧರೆಗಿಳಿದ ವರುಣ ರಾಜ ಪರಂಪರೆಯಿಂದಲೂ ಮೈಸೂರು ದಸರಾ ತನ್ನದೇ ಆದ ಸಾಂಸ್ಕೃತಿಕ ಇತಿಹಾಸ ಹೊಂದಿದೆ. ರಾಜಪರಂಪರೆಯಲ್ಲಿ ನಡೆಯುತ್ತಿದ್ದ ಶರನ್ನವರಾತ್ರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿಯಲ್ಲಿ ರಾಜರು ಕುಳಿತು ಬನ್ನಿ ಮಂಟಪದವರೆಗೆ ಮೆರವಣಿಗೆ ಹೋಗುತ್ತಿದ್ದರು. ಆ ಸಮಯದಲ್ಲಿ ತಪ್ಪದೇ ಮಳೆ ಬರುತ್ತಿತ್ತು.
ಮಳೆ ಬಂದರೆ ಮಾತ್ರ ಮುಂದಿನ ವರ್ಷ ಉತ್ತಮ ಮಳೆಯಾಗುತ್ತದೆ ಎಂದು ನಂಬಿಕೊಂಡು ಬರಲಾಗುತ್ತಿತ್ತು. ಜಂಬೂಸವಾರಿ ಮುಗಿಯುವ ಹೊತ್ತಿಗೆ ಮಳೆ ಬರದಿದ್ದರೆ ಮುಂದಿನ ವರ್ಷ ಬರಗಾಲ ಎಂಬ ನಂಬಿಕೆ ಹಿಂದಿನಿಂದಲೂ ರೂಢಿ ಇತ್ತು.
ಅಂಬಾರಿ ಅರಮನೆ ಸೇರುತ್ತಿದ್ದಂತೆ ಧರೆಗಿಳಿದ ವರುಣ ಇದೇ ನಂಬಿಕೆ ಈಗಲೂ ಮುಂದುವರೆದುಕೊಂಡು ಬಂದಿದೆ. ಚಿನ್ನದ ಅಂಬಾರಿಯಲ್ಲಿ ಚಾಮುಂಡಿ ತಾಯಿಯ ಪ್ರತಿಷ್ಠಾಪನೆ ಮಾಡಿ ಜಂಬೂಸವಾರಿಗೆ ಪುಷ್ಪಾರ್ಚನೆ ನಂತರ ಮೆರವಣಿಗೆ ಹೊರಟು ಅರಮನೆ ದಾಟುತ್ತಿದ್ದಂತೆ ಮಳೆ ಬಂದರೆ ಮುಂದಿನ ವರ್ಷ ಉತ್ತಮ ಮಳೆಯಾಗುತ್ತದೆ ಎಂಬ ನಂಬಿಕೆ ಇದೆ.
ಅದರಂತೆ ಇಂದು ಜಂಬೂಸವಾರಿ ಮೆರವಣಿಗೆ ಅರಮನೆಯೊಳಗೆ ನಡೆದು, ಜಂಬೂಸವಾರಿಯನ್ನು ಆನೆಯಿಂದ ಕೆಳಗಿಳಿಸಿ ಅರಮನೆಯೊಳಗೆ ಅಂಬಾರಿ ಸೇರುತ್ತಿದ್ದಂತೆ ಸುಮಾರು 1 ಗಂಟೆ ಕಾಲ ಮೈಸೂರಿನಲ್ಲಿ ಭಾರಿ ಮಳೆಯಾಗಿದೆ. ಈ ಹಿನ್ನೆಲೆ ಮುಂದಿನ ವರ್ಷ ಉತ್ತಮ ಮಳೆಯಾಗುತ್ತದೆ ಎಂಬ ಸೂಚನೆ ಎನ್ನುತ್ತಾರೆ ಹಿರಿಯರು.