ಕರ್ನಾಟಕ

karnataka

ETV Bharat / state

ಜೆಡಿಎಸ್​​ನಲ್ಲಿ ಹೈ ಕಮಾಂಡ್ ಇಲ್ಲ.. ಎಲ್ಲರೂ ಹೈ ಕಮಾಂಡ್​​ಗಳೇ: ಹೆಚ್​ಡಿಕೆ - ಜೆಡಿಎಸ್​​ ಹೈ ಕಮಾಂಡ್

ಪ್ರತಿ ದಿನ ಜೆಡಿಎಸ್​​ ಬಿಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಪಕ್ಷದ ಹೈ ಕಮಾಂಡ್ ಗಮನಿಸುತ್ತಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಹೆಚ್​ಡಿಕೆ ಪ್ರತಿಕ್ರಿಯಿಸಿ, ನಮ್ಮಲ್ಲಿ ಹೈ ಕಮಾಂಡ್ ಇಲ್ಲ, ಎಲ್ಲರೂ ಹೈ ಕಮಾಂಡೇ ಎಂದು ವ್ಯಂಗ್ಯವಾಗಿ ಹೇಳಿದರು.

hd kumaraswamy opinion on his party high commond
ಜೆಡಿಎಸ್​​ನಲ್ಲಿ ಹೈ ಕಮಾಂಡ್ ಇಲ್ಲ. ಎಲ್ಲರೂ ಹೈ ಕಮಾಂಡ್​​ಗಳೆ: ಹೆಚ್.ಡಿ.ಕೆ

By

Published : Mar 11, 2021, 2:18 PM IST

ಮೈಸೂರು: ಜೆಡಿಎಸ್​​ನಲ್ಲಿ ಹೈ ಕಮಾಂಡ್ ಇಲ್ಲ. ಎಲ್ಲರೂ ಹೈ ಕಮಾಂಡ್​​ ಆಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಇಂದು ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರ​ಸ್ವಾಮಿ‌, ಸಹಕಾರಿ ಕ್ಷೇತ್ರದ ಚುನಾವಣೆಗಳಲ್ಲಿ ನಾನು ಎಂದೂ ಭಾಗವಹಿಸಿರಲಿಲ್ಲ. ನನ್ನ ಸಹೋದರ ಹೆಚ್.ಡಿ. ರೇವಣ್ಣ ಹೆಚ್ಚಾಗಿ ಭಾಗವಹಿಸುತ್ತಿದ್ದರು. ಆದರೆ, ಮೈಸೂರಿನ ಮೈಮೂಲ್​ನಲ್ಲಿ ಇದೇ ತಿಂಗಳ 16 ರಂದು ನಡೆಯುವ ಚುನಾವಣೆಯಲ್ಲಿ ನಮ್ಮ ಬೆಂಬಲಿತ ಅಭ್ಯರ್ಥಿಗಳು ಗೆಲ್ಲಬೇಕು. ಆ ದೃಷ್ಟಿಯಿಂದ ನಾನೇ 2 ದಿನಗಳ ಕಾಲ ಪ್ರಚಾರ ನಡೆಸುತ್ತೇನೆ ಎಂದು ಹೇಳಿದರು‌.

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ

ಇನ್ನೂ ನಿತ್ಯ ಪಕ್ಷವನ್ನು ಬಿಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಪಕ್ಷದ ಹೈ ಕಮಾಂಡ್ ಗಮನಿಸುತ್ತಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಮ್ಮಲ್ಲಿ ಹೈ ಕಮಾಂಡ್ ಇಲ್ಲ. ಎಲ್ಲರೂ ಹೈ ಕಮಾಂಡೇ ಎಂದು ವ್ಯಂಗ್ಯವಾಗಿ ಹೇಳಿದರು.

ಇದನ್ನೂ ಓದಿ:ಎಸ್ಐಟಿ ತನಿಖೆಯ ಬೆಳವಣಿಗೆ ನೋಡಿ ಎಫ್ಐಆರ್ ದಾಖಲು: ಬಸವರಾಜ ಬೊಮ್ಮಾಯಿ

ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿರುವ ಸಿಡಿ ಪ್ರಕರಣವನ್ನು ಸದ್ಯದ ಮಟ್ಟಿಗೆ ಎಸ್​​​ಐಟಿಗೆ ವಹಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ, ಯಾವುದೇ ತನಿಖೆಗಳಾದರೂ ತಪ್ಪಿತಸ್ಥರಿಗೆ ಶಿಕ್ಷೆಯನ್ನು ವಿಧಿಸುವಲ್ಲಿ ವಿಫಲವಾಗಿವೆ. ಈ ಎಲ್ಲ ತನಿಖೆಗಳು ಬರಿ ನಾಮಕೇವಾಸ್ತೆಯಾಗಿದ್ದು, ಹಲವು ಪ್ರಕರಣಗಳಿಗೆ ಇಂದಿಗೂ ಸಹ ನ್ಯಾಯ ಒದಗಿಸಿಲ್ಲ ಎಂದು ಆರೋಪಿಸಿದರು.

ABOUT THE AUTHOR

...view details