ಜೂನ್ 29 ರಿಂದ ಹೆಚ್ ಡಿ ಕೋಟೆ ತಾಲೂಕು ಲಾಕ್ಡೌನ್.. ಶಾಸಕ ಅನಿಲ್ ಚಿಕ್ಕಮಾದು - corona cases increasing in mysore news
ಜನರ ಆರೋಗ್ಯದ ದೃಷ್ಟಿಯಿಂದ ಕೊರೊನಾ ಸೋಂಕು ನಿಯಂತ್ರಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅದಕ್ಕಾಗಿ ಹೆಚ್ ಡಿ ಕೋಟೆ ತಾಲೂಕನ್ನು ಲಾಕ್ಡೌನ್ ಮಾಡಲಾಗುತ್ತಿದೆ..
![ಜೂನ್ 29 ರಿಂದ ಹೆಚ್ ಡಿ ಕೋಟೆ ತಾಲೂಕು ಲಾಕ್ಡೌನ್.. ಶಾಸಕ ಅನಿಲ್ ಚಿಕ್ಕಮಾದು lockdown](https://etvbharatimages.akamaized.net/etvbharat/prod-images/768-512-7791632-thumbnail-3x2-chikmadhu.jpg)
ಎಚ್.ಡಿ.ಕೋಟೆ ತಾಲೂಕು ಲಾಕ್ಡೌನ್
ಮೈಸೂರು: ಕೊರೊನಾ ಸೋಂಕಿತ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಹೆಚ್ ಡಿ ಕೋಟೆ ತಾಲೂಕನ್ನು ಜೂನ್ 29 ರಿಂದ ಜುಲೈ 10ರವರೆಗೆ ಲಾಕ್ಡೌನ್ ಮಾಡಲಾಗುವುದು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದ್ದಾರೆ.
ಹೆಚ್ ಡಿ ಕೋಟೆ ತಾಲೂಕು ಲಾಕ್ಡೌನ್ ಜಾರಿ ಕುರಿತಂತೆ ಶಾಸಕರ ಸಭೆ
ಇದೇ ಸೋಮವಾರದ ಜೂನ್ 29 ರಿಂದ ಜುಲೈ 10ರವರೆಗೆ ಲಾಕ್ಡೌನ್ ಆಗಲಿದೆ. ಬೆಳಗ್ಗೆ 7 ರಿಂದ 2 ಗಂಟೆಯವರೆಗೆ ಮಾತ್ರ ದಿನಸಿ ಅಂಗಡಿಗಳನ್ನು ತೆರೆಯಲು ಅವಕಾಶ ಹಾಗೂ ಸರ್ಕಾರಿ ಕಚೇರಿಯಲ್ಲಿ 1 ಗಂಟೆವರೆಗೆ ಮಾತ್ರ ಸಾರ್ವಜನಿಕರಿಗೆ ಅವಕಾಶವಿದೆ. ಪ್ರತಿ ಭಾನುವಾರ ಸಂಪೂರ್ಣ ಲಾಕ್ಡೌನ್ ಇರುತ್ತದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.