ಮೈಸೂರು:ಊರಿನಿಂದ ಹಾಸ್ಟೆಲ್ಗೆ ಬಂದ ವಿದ್ಯಾರ್ಥಿ ತನ್ನ ಕೊಠಡಿಯ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಎಚ್. ಡಿ ಕೋಟೆ ನಗರದಲ್ಲಿ ನಡೆದಿದೆ. ಆಕಾಶ್ ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿ.
ಈತ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಬಾಲಕ ನಗರದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಾಸವಿದ್ದ. ಇಂದು ತಮ್ಮ ಗ್ರಾಮದಿಂದ ಹಾಸ್ಟೆಲ್ಗೆ ಬಂದಿದ್ದು, ಇಲ್ಲಿ ಕೊಠಡಿಯ ಫ್ಯಾನಿಗೆ ತನ್ನ ಬೆಡ್ ಶೀಟ್ನಿಂದ ನೇಣಿಗೆ ಶರಣಾಗಿದ್ದಾನೆ.