ಮೈಸೂರು: ಕಲಬುರಗಿ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಬಗ್ಗೆ ನನ್ನ ಜೊತೆ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ್ದಾರೆ. ಮೊದಲು ನಿಮ್ಮ ಪಕ್ಷದ ನಾಯಕರ ಜೊತೆ ಮಾತನಾಡಿ ಎಂದು ಖರ್ಗೆಗೆ ಸಲಹೆ ನೀಡಿದ್ದೇನೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಮೈಸೂರಿನಲ್ಲಿ ಹೇಳಿದ್ರು.
ಪುಸ್ತಕ ಬಿಡುಗಡೆ ಬಗ್ಗೆ ಚರ್ಚೆ ಮಾಡಲು ಮೈಸೂರಿಗೆ ಆಗಮಿಸಿದ್ದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿ, ಕಲಬುರಗಿಯಲ್ಲಿ ಏಳು ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದ್ದೆವು. ಅದರಲ್ಲಿ ನಾಲ್ಕು ಸ್ಥಾನವನ್ನು ಗೆದ್ದಿದ್ದೇವೆ. ಇದು ಹೆಚ್.ಡಿ.ಕುಮಾರಸ್ವಾಮಿ ಅವರ ಶ್ರಮದ ಫಲವಾಗಿದೆ. ಎರಡು ಸ್ಥಾನಗಳಲ್ಲಿ ಮಾರ್ಜಿನ್ ಇಂದ ಸೋತಿದ್ದೇವೆ ಅಷ್ಟೇ. ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷದ ಶಕ್ತಿ ಏನು? ಎಂದು ಕೇಳುವವರಿಗೆ ಉತ್ತರ ಇದಾಗಿದೆ ಎಂದರು.