ಕರ್ನಾಟಕ

karnataka

ETV Bharat / state

ಪ್ರಧಾನಿ ಮೋದಿ ವಿರುದ್ಧ ಮಾಜಿ ಸಚಿವ ಮಹದೇವಪ್ಪ ಕಿಡಿ - ಮೈಸೂರು ಸುದ್ದಿ

ಟ್ವಿಟ್ಟರ್​ನಲ್ಲಿ ಇಂಟರ್​ನೆಟ್ ಸ್ಥಗಿತಕ್ಕೆ ಪ್ರಧಾನಿ ಮೋದಿಯನ್ನ ಟೀಕಿಸಿರುವ ಮಹದೇವಪ್ಪ ಅವರು, ವಾಕ್ ಸ್ವಾತಂತ್ರ್ಯ ತಡೆದಿರುವುದು ಪ್ರಜಾಪ್ರಭುತ್ವದ ಹೆಸರಿನಲ್ಲಿ ಧರ್ಮಾಂಧತೆ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.

HC Mahadevappa
ಸಚಿವ ಮಹದೇವಪ್ಪ

By

Published : Feb 7, 2021, 12:35 PM IST

ಮೈಸೂರು: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶ ಇಂಟರ್ನೆಟ್ ಸ್ಥಗಿತಕ್ಕೆ ಮೊದಲ ಸ್ಥಾನ ಹೊಂದಿದೆ ಎಂದು ಮಾಜಿ ಸಚಿವ ಡಾ.ಎಚ್‌‌.ಸಿ‌. ಮಹದೇವಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವಿಟ್ಟರ್​ನಲ್ಲಿ ಕಿಡಿಕಾರಿದ್ದಾರೆ.

ಇಂಟರ್ನೆಟ್ ಸ್ಥಗಿತಗೊಳಿಸುವಿಕೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಈ ಮೂಲಕ ದೇಶದಲ್ಲಿ ವಾಕ್ ಸ್ವಾತಂತ್ರ್ಯವನ್ನ ತಡೆಯುವ ಸಾಧನ ಮಾರ್ಪಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಸಚಿವ ಮಹದೇವಪ್ಪ ಭಾರಿ ಟೀಕೆ ಮಾಡಿದ್ದಾರೆ.

ಟ್ವಿಟ್ಟರ್​ನಲ್ಲಿ ಅಂಕಿ ಅಂಶದೊಂದಿಗೆ ಪ್ರಧಾನಿ ಮೋದಿಯನ್ನ ಟೀಕಿಸಿರುವ ಮಹದೇವಪ್ಪ ಅವರು, ವಾಕ್ ಸ್ವಾತಂತ್ರ್ಯ ತಡೆದಿರುವುದು ಪ್ರಜಾಪ್ರಭುತ್ವದ ಹೆಸರಿನಲ್ಲಿ ಧರ್ಮಾಂಧತೆ ಅಲ್ಲವೇ? ಮೋದಿ ದೇಶ ಕಂಡ ಅತ್ಯಂತ ದುರ್ಬಲ ಪ್ರಧಾನಿ ಎಂದು ಟ್ವಿಟ್​ ಮೂಲಕ ಕುಟುಕಿದ್ದಾರೆ.

ABOUT THE AUTHOR

...view details