ಕರ್ನಾಟಕ

karnataka

ETV Bharat / state

ಒಟ್ಟಿಗೆ ಚಾಮುಂಡಿ ತಾಯಿ‌ ದರ್ಶನ ಪಡೆದ ನಿಖಿಲ್-ಹರೀಶ್‌ಗೌಡ.. ಹೆಚ್‌ಡಿಡಿ ಪ್ಲಾನ್ ವರ್ಕೌಟ್‌ ಆಗುತ್ತಾ!?

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಜಿ ಡಿ ಹರೀಶ್ ಗೌಡನಿಗೆ ತಂದೆ‌ ಜಿ ಟಿ ದೇವೇಗೌಡರಿಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಟಿಕೆಟ್ ನೀಡಲು ದೇವೇಗೌಡರು ಒಪ್ಪಿದ್ದು, ಆ ಮೂಲಕ ಇಬ್ಬರನ್ನು ಪಕ್ಷದಲ್ಲೇ ಉಳಿಸಿಕೊಂಡು ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಉಳಿಸಿಕೊಳ್ಳಲು ದೇವೇಗೌಡರು ಹೊಸ ಪ್ಲಾನ್ ರೂಪಿಸಿದ್ದಾರೆ ಎನ್ನಲಾಗಿದೆ..

harishgowda-and-nikhilkumaraswamy-visited-chamundi-temple
ನಿಖಿಲ್ ಹರೀಶ್ ಗೌಡ

By

Published : Oct 22, 2021, 3:42 PM IST

ಮೈಸೂರು :ನಿಖಿಲ್ ಕುಮಾರಸ್ವಾಮಿ ಹಾಗೂ ಜಿ ಟಿ ದೇವೇಗೌಡ ಪುತ್ರ ಹರೀಶ್ ಗೌಡ ಇಂದು ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ತಾಯಿಗೆ ಒಟ್ಟಿಗೆ ಪೂಜೆ ಸಲ್ಲಿಸಿದ್ದಾರೆ. ಇದು ರಾಜಕೀಯ ವಲಯದಲ್ಲಿ ಹಲವಾರು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ.

ಒಟ್ಟಿಗೆ ಚಾಮುಂಡಿ ತಾಯಿ‌ ದರ್ಶನ ಪಡೆದ ನಿಖಿಲ್-ಹರೀಶ್ ಗೌಡ..

ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಹಾಗೂ ಶಾಸಕ ಜಿ ಟಿ ದೇವೇಗೌಡರು ಪರಸ್ಪರ ವಿರೋಧಿಗಳಾಗಿದ್ದರೂ ಮಕ್ಕಳು ಮಾತ್ರ ಮಿತ್ರತ್ವವನ್ನು ತೋರಿದ್ದಾರೆ. ಇಂದು ನಿಖಿಲ್ ಕುಮಾರಸ್ವಾಮಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹರೀಶ್ ಗೌಡ ಕೂಡ ಅವರ ಜೊತೆ ಕಾಣಿಸಿಕೊಂಡಿರುವುದು ಗಮನಸೆಳೆದಿದೆ.

ಇತ್ತೀಚಿಗೆ ಶಾಸಕ ಜಿ.ಟಿ.ದೇವೆಗೌಡ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಬಹಿರಂಗವಾಗಿ ‌ಹೇಳಿದ ಬೆನ್ನಲ್ಲೇ ಇಂದು ನಿಖಿಲ್ ಕುಮಾರಸ್ವಾಮಿ ಹಾಗೂ ಹರೀಶ್ ಗೌಡರ ಭೇಟಿ‌ ರಾಜಕೀಯ ವಲಯದಲ್ಲಿ ಹಲವಾರು ಅನುಮಾನಗಳನ್ನು ಹುಟ್ಟು ಹಾಕಿದೆ.

ಜೆಡಿಎಸ್‌ನಲ್ಲೇ ಉಳಿಸಿಕೊಳ್ಳಲು ಪ್ರಯತ್ನ :ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡ ಅವರು ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಸೇರುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆ ಅವರನ್ನು ಜೆಡಿಎಸ್‌ನಲ್ಲೇ ಉಳಿಸಿಕೊಳ್ಳುವ ಪ್ರಯತ್ನವನ್ನ ಹೆಚ್ ಡಿ ದೇವೇಗೌಡರು ಆರಂಭಿಸಿದ್ದಾರೆ. ಆದ್ರೆ, ಇದಕ್ಕೆ ಹೆಚ್‌.ಡಿ.ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದ್ದರು. ಆದರೂ ನಿಖಿಲ್ ಕುಮಾರಸ್ವಾಮಿ ಮೂಲಕ ದೇವೇಗೌಡರು ಜಿ ಟಿ ದೇವೇಗೌಡ ಮತ್ತು ಅವರ ಮಗ ಹರೀಶ್ ಗೌಡರನ್ನು ಜೆಡಿಎಸ್‌ನಲ್ಲೇ ಉಳಿಸಿಕೊಳ್ಳಲು ಪ್ರಯತ್ನ ಆರಂಭಿಸಿದ್ದಾರೆ.

ಈ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಜಿ ಡಿ ಹರೀಶ್ ಗೌಡನಿಗೆ ತಂದೆ‌ ಜಿ ಟಿ ದೇವೇಗೌಡರಿಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಟಿಕೆಟ್ ನೀಡಲು ದೇವೇಗೌಡರು ಒಪ್ಪಿದ್ದು, ಆ ಮೂಲಕ ಇಬ್ಬರನ್ನು ಪಕ್ಷದಲ್ಲೇ ಉಳಿಸಿಕೊಂಡು ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಉಳಿಸಿಕೊಳ್ಳಲು ದೇವೇಗೌಡರು ಹೊಸ ಪ್ಲಾನ್ ರೂಪಿಸಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details