ಕರ್ನಾಟಕ

karnataka

ETV Bharat / state

ಚಿಕನ್ ಅಂಗಡಿ ಕ್ಲೀನ್​ ಮಾಡಿ ಎಂದಿದ್ದಕ್ಕೆ ಹಿಗ್ಗಾ ಮುಗ್ಗ ಹೊಡೆದ ಮಾಲೀಕ: ಸಿಸಿ ಕ್ಯಾಮೆರಾದಲ್ಲಿ ಸೆರೆ - ಚಿಕನ್​ ಅಂಗಡಿ ಮಾಲೀಕನಿಂದ ಹಲ್ಲೆ

ಹಕ್ಕಿಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕನ್ ಅಂಗಡಿ ಸ್ವಚ್ಛಗೊಳಿಸಿ ಎಂದು ಹೇಳಿದ ಕುಟುಂಬದವರ ಮೇಲೆ ಅಂಗಡಿ ಮಾಲೀಕ ಹಲ್ಲೆ ಮಾಡಿರುವ ಘಟನೆ ನಗರದ ಕುಂಬಾರಕೊಪ್ಪಲಿನಲ್ಲಿ ನಡೆದಿದೆ.

harassment for saying to do clean a chicken shop
ಚಿಕನ್ ಅಂಗಡಿ ಸ್ವಚ್ಛಗೊಳಿಸಿ ಎಂದು ಹೇಳಿದ್ದೇ ತಪ್ಪಾಯ್ತ: ಹಲ್ಲೆ ನಡೆಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

By

Published : Mar 17, 2020, 11:41 AM IST

ಮೈಸೂರು: ಹಕ್ಕಿಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಮ್ಮ ಮನೆಯ ಬಳಿ ಇದ್ದ ಚಿಕನ್ ಅಂಗಡಿ ಸ್ವಚ್ಛಗೊಳಿಸಿ ಎಂದು ಹೇಳಿದ ಕುಟುಂಬದವರ ಮೇಲೆ ಅಂಗಡಿ ಮಾಲೀಕ ಹಲ್ಲೆ ಮಾಡಿರುವ ಘಟನೆ ನಗರದ ಕುಂಬಾರಕೊಪ್ಪಲಿನಲ್ಲಿ ನಡೆದಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಚಿಕನ್ ಅಂಗಡಿ ಸ್ವಚ್ಛಗೊಳಿಸಿ ಎಂದು ಹೇಳಿದ್ದೇ ತಪ್ಪಾಯ್ತ: ಹಲ್ಲೆ ನಡೆಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮೈಸೂರಿನಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ಇನ್ನು ಮುಂದೆ ಚಿಕನ್ ಅಂಗಡಿಯನ್ನು ಬಂದ್ ಮಾಡಬೇಕೆಂದು ತುರ್ತು ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿಗಳು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬದವರು ತಮ್ಮ ಪಕ್ಕದಲ್ಲೇ ಇದ್ದ ಚಿಕನ್ ಅಂಗಡಿ ಮಾಲೀಕನಿಗೆ ಈ ಬಗ್ಗೆ ತಿಳಿಸಿದಾಗ, ಕೋಪಗೊಂಡ ಮಾಲೀಕನು ಕುಟುಂಬದವರ ಮೇಲೆ ಹಲ್ಲೆ ಮಾಡಿದ್ದಾನೆ.

ಈ ಸಂದರ್ಭದಲ್ಲಿ ಅಕ್ಕಪಕ್ಕದಲ್ಲಿ ಇದ್ದ ಜನರು ಇಬ್ಬರನ್ನು ಸಮಾಧಾನ ಮಾಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಸಂಬಂಧ ಹಲ್ಲೆ ಮಾಡಲು ಬಂದ ಚಿಕನ್ ಅಂಗಡಿಯ ಮಾಲೀಕನ ವಿರುದ್ಧ ಸಿಸಿಟಿವಿ ದೃಶ್ಯಗಳನ್ನು ಆಧಾರವಾಗಿಟ್ಟುಕೊಂಡು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ABOUT THE AUTHOR

...view details