ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಫಿಲ್ಮ್ ಸಿಟಿಗೆ ಬೇಕಾದ ಎಲ್ಲಾ ರೀತಿಯ ವಾತಾವರಣ ಇದೆ. ಬೆಂಗಳೂರಿಗಿಂತ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಮೈಸೂರು ಸೂಕ್ತವಾಗಿದೆ ಎಂದು ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಹೇಳಿದ್ದಾರೆ. ಇಂದು ನಗರದ ಪತ್ರಕರ್ತರ ಭವನದಲ್ಲಿ, ಮಾಧ್ಯಮದವರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣವಾದರೆ ಉತ್ತಮ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಸಾಂಸ್ಕೃತಿಕ ರಾಜಧಾನಿಯಾದ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಹೆಚ್ಚು ಸೂಕ್ತವಾಗಿದೆ. ಬೆಂಗಳೂರು ಈಗ ತುಂಬಾ ಬೆಳೆದುಹೋಗಿದೆ. ಅಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕಿಂತ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಹೆಚ್ಚು ಸೂಕ್ತವಾಗಿದೆ. ಇಲ್ಲಿ ಸುತ್ತಮುತ್ತಲೂ ಪ್ರಾಕೃತಿಕ ಸೌಂದರ್ಯ ಜೊತೆಗೆ ಪಾರಂಪರಿಕ ಸೌಂದರ್ಯವೂ ಸಹ ಹೆಚ್ಚಾಗಿದೆ. ಪ್ರವಾಸಿ ತಾಣಗಳು ಸಹ ಮೈಸೂರಿನಲ್ಲಿ ಹೆಚ್ಚಾಗಿರುವುದರಿಂದ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಇದು ಸೂಕ್ತ ಸ್ಥಳ ಎಂದು ಹೇಳಿದರು.
ದಸರಾ ಉದ್ಘಾಟಕರಾಗಿ ನೇಮಿಸಿರುವುದು ಸಂತಸ ತಂದಿದೆ.. ದಸರಾ ಆಚರಣೆ ಪ್ರತಿಕ್ರಿಯಿಸಿದ ಹಂಸಲೇಖ, ನನ್ನನ್ನು ಈ ಬಾರಿಯ ದಸರಾ ಉದ್ಘಾಟಕರಾಗಿ ಆಯ್ಕೆ ಮಾಡಿದ್ದಾರೆ. ಇದು ನನ್ನ ಭಾಗ್ಯ. ಕಳೆದ ಬಾರಿ ರಾಷ್ಟ್ರಪತಿಗಳು ದಸರಾ ಉದ್ಘಾಟನೆ ಮಾಡಿದ್ದರು. ನನ್ನನ್ನು ದಸರಾ ಉದ್ಘಾಟನೆಗೆ ಎಂದು ಕರೆದಿದ್ದಾರೆ. ಇದು ನನಗೆ ತುಂಬಾ ಸಂತೋಷ ಕೊಟ್ಟಿದೆ ಎಂದರು. ಬಳಿಕ ಮಹಿಷಾ ದಸರಾ ವಿಚಾರವಾಗಿ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.
ಇದನ್ನೂ ಓದಿ:14 ದಸರಾ ಗಜಪಡೆಗೆ ವಿಮೆ; ಸೆಪ್ಟೆಂಬರ್ 1ರಿಂದ ಆಕ್ಟೋಬರ್ ಅಂತ್ಯದವರೆಗೆ ವಿಮೆ ಅವಧಿ