ಮೈಸೂರು:ಜೆಡಿಸ್‌ಗೆ ರಾಜೀನಾಮೆ ನೀಡಿ ತಿಂಗಳ ಬಳಿಕ ಹುಣಸೂರು ಕ್ಷೇತ್ರಕ್ಕೆ ಅನರ್ಹ ಶಾಸಕ ಹೆಚ್. ವಿಶ್ವನಾಥ್ ಕಾಲಿಟ್ಟರು.
ತಿಂಗಳ ನಂತರ ಸ್ವಕ್ಷೇತ್ರ ಹುಣಸೂರಿಗೆ ವಿಶ್ವನಾಥ್ ಭೇಟಿ - H Vishwanath visit to hunasuru
ಶಾಸಕ ಹೆಚ್. ವಿಶ್ವನಾಥ್ ಅವರು ಇಂದು ತಮ್ಮ ಸ್ವಕ್ಷೇತ್ರ ಹುಣಸೂರಿಗೆ ಭೇಟಿ ನೀಡಿದರು. ಈ ವೇಳೆ ಅವರನ್ನು ಕಾರ್ಯಕರ್ತರು ಹೂಮಾಲೆ ಹಾಕಿ ಸ್ವಾಗತಿಸಿದರು.
H Vishwanath
ಹೆಚ್. ವಿಶ್ವನಾಥ್ ಆಗಮನ ಹಿನ್ನೆಲೆಯಲ್ಲಿ ಅವರ ಮನೆ ಮುಂದೆ ಜಮಾಯಿಸಿದ್ದ ನೂರಾರು ಅಭಿಮಾನಿಗಳು ಆತ್ಮೀಯವಾಗಿ ಬರಮಾಡಿಕೊಂಡರು. 'ಹಳ್ಳಿಹಕ್ಕಿ'ಯ ಮುಂದಿನ ರಾಜಕೀಯ ನಡೆಯ ಬಗ್ಗೆ ಅಭಿಮಾನಿಗಳು ಹಾಗೂ ಹಿತೈಷಿಗಳೊಂದಿಗೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.
ವಿಶ್ವನಾಥ್ ಭೇಟಿ ವೇಳೆ ಯಾವುದೇ ಅನಾಹುತ ಎದುರಾಗದಂತೆ ಮುನ್ನೆಚ್ಚೆರಿಕಾ ಕ್ರಮವಾಗಿ ಪೊಲೀಸರು ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.