ಮೈಸೂರು:ಅನರ್ಹ ಶಾಸಕ ಹೆಚ್. ವಿಶ್ವನಾಥ್ ರಾಜ್ಯದ ಕೈ ನಾಯಕರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಅವಾಚ್ಯ ಶಬ್ಧ ಬಳಸಿದ ಹಳ್ಳಿಹಕ್ಕಿ: ವಿಡಿಯೋ ವೈರಲ್ - abusing words
ಹೆಚ್.ವಿಶ್ವನಾಥ್ ರಾಜ್ಯದ ಕೈ ನಾಯಕರನ್ನು ಅವ್ಯಾಚ್ಯ ಶಬ್ಬಗಳಿಂದ ನಿಂದಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅನರ್ಹ ಶಾಸಕ ಹೆಚ್. ವಿಶ್ವನಾಥ್ ತಮ್ಮ ವಕೀಲರನ್ನು ಭೇಟಿ ಮಾಡಲು ದೆಹಲಿಗೆ ಹೋಗಿದ್ದು, ಅಲ್ಲಿ ಕರ್ನಾಟಕ ಭವನದಿಂದ ಹೊರ ಬರುತ್ತಿರುವಾಗ ಈ ಘಟನೆ ನಡೆದಿದೆ.
ಅಲ್ಲಿದ್ದ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ವಿಶ್ವನಾಥ್ ಅವರಿಗೆ ನಮಸ್ಕರಿಸಿ, ಕಾಂಗ್ರೆಸ್ ಪಕ್ಷ ನಿಮಗೆ ತಾಯಿ ಇದ್ದಂತೆ ಎಂದು ಯಾವಾಗಲೂ ಹೇಳುತ್ತಿದ್ದರಲ್ಲ ಸರ್. ಈಗ ನೀವೇ ಪಕ್ಷ ಬಿಟ್ಟು ಹೋಗಿದ್ದೀರಿ ಎಂದು ಪ್ರಶ್ನೆ ಮಾಡಿದಾಗ ತಕ್ಷಣ ಕೋಪಗೊಂಡ ವಿಶ್ವನಾಥ್, ಕಾಂಗ್ರೆಸ್ ಉತ್ತಮ ಪಕ್ಷವೇ, ಆದರೆ ಕರ್ನಾಟಕದ ಕಾಂಗ್ರೆಸ್ ಪಕ್ಷದ ನಾಯಕರು ಅಯೋಗ್ಯರು ಎಂದು ನಿಂದಿಸಿ ಹೋಗಿರುವ ವಿಡಿಯೋ, ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ, ಈ ಬಗ್ಗೆ ವಿಶ್ವನಾಥ್ ಯಾವ ಪ್ರತಿಕ್ರಿಯೆಯೂ ನೀಡಿಲ್ಲ ಎನ್ನಲಾಗಿದೆ.