ಮೈಸೂರು: ನಾನು ಟವಲ್ ಹಾಕಿದ್ದರೆ, ನೀನು ರಗ್ಗನ್ನೆ (ಕಂಬಳಿ) ಹಾಕುತ್ತಿದ್ದೀಯಲ್ಲಪ್ಪ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು ಕುಮಾರಸ್ವಾಮಿ ವಿರುದ್ಧ ಏಕ ವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.
ನಾನು ಟವಲ್ ಹಾಕಿದ್ರೆ, ನೀನು ರಗ್ಗನ್ನೇ ಹಾಕುತ್ತಿರುವೆಯಲ್ಲಪ್ಪ: ಹೆಚ್ಡಿಕೆಗೆ ಕುಕ್ಕಿದ ಹಳ್ಳಿ ಹಕ್ಕಿ - H Vishwanath
ವಿಶ್ವನಾಥ್ ಈಗಾಗಲೇ ಬೇರೆ ಪಕ್ಷಗಳಿಗೆ ಟವಲ್ ಹಾಕುತ್ತಿದ್ದಾರೆ ಎಂಬ ಹೆಚ್ಡಿಕೆ ಹೇಳಿಕೆಗೆ ತಿರುಗೇಟು ನೀಡಿ, ನಾನು ಟವಲ್ ಹಾಕುತ್ತಿದ್ದರೆ, ಎಚ್. ಡಿ. ಕುಮಾರಸ್ವಾಮಿ ಬಿಜೆಪಿ ಪಕ್ಷಕ್ಕೆ ರಗ್ಗನ್ನೇ (ಕಂಬಳಿ) ಹಾಕುತ್ತಿದ್ದೀಯಲ್ಲಪ್ಪ ಎಂದು ಹೆಚ್ ವಿಶ್ವನಾಥ್ ತಿರುಗೇಟು ನೀಡಿದ್ದಾರೆ.
ಇಂದು ತಮ್ಮ ಕೆ.ಆರ್. ನಗರದ ಮನೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು , ವಿಶ್ವನಾಥ್ ಈಗಾಗಲೇ ಬೇರೆ ಪಕ್ಷಗಳಿಗೆ ಟವಲ್ ಹಾಕುತ್ತಿದ್ದಾರೆ ಎಂಬ ಹೆಚ್ಡಿಕೆ ಹೇಳಿಕೆಗೆ ತಿರುಗೇಟು ನೀಡಿ, ನಾನು ಟವಲ್ ಹಾಕುತ್ತಿದ್ದರೆ, ಎಚ್. ಡಿ. ಕುಮಾರಸ್ವಾಮಿ ಬಿಜೆಪಿ ಪಕ್ಷಕ್ಕೆ ರಗ್ಗನ್ನೇ (ಕಂಬಳಿ) ಹಾಕುತ್ತಿದ್ದೀಯಲ್ಲಪ್ಪ ಎಂದು ತಿರುಗೇಟು ನೀಡಿದ್ದಾರೆ.
ಸಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಕ್ಲರ್ಕ್ ಆಗಿದ್ದೆ ಎಂದು ಹೇಳುತ್ತಿದ್ದಾರೆ. ಈಗ ಅವರೇ ಸಮ್ಮಿಶ್ರ ಸರ್ಕಾರದ ಪತನಕ್ಕೆ ಯಾರು ಕಾರಣ ಎಂದು ಸತ್ಯವನ್ನು ಒಪ್ಪಿಕೊಳ್ಳುತ್ತಿದ್ದಾರೆ. ಪತನದ ನಂತರ ಸತ್ಯಾಂಶ ಹೊರ ಬರುತ್ತಿದ್ದು, ಸಮಿಶ್ರ ಸರ್ಕಾರ ಬೀಳೋಕೆ ನಾವ್ಯಾರೂ ಕಾರಣ ಅಲ್ಲ ಎಂಬುದು ಈಗ ಗೊತ್ತಾಗುತ್ತಿದೆ ಎಂದ ಅವರು, ನಾಮಧಾರಿಗೌಡ ಜನಾಂಗವನ್ನು 2ಎ ಗೆ ಸೇರ್ಪಡೆ ಮಾಡಿಸಲು ಕಾನೂನು ಹೋರಾಟ ಮಾಡಿ ಎಂದು ಜನಾಂಗಕ್ಕೆ ಕರೆ ನೀಡಿದರು.