ಕರ್ನಾಟಕ

karnataka

By

Published : Apr 15, 2023, 6:05 PM IST

Updated : Apr 15, 2023, 9:12 PM IST

ETV Bharat / state

ಸೋಮಣ್ಣ ಮತ್ತು ಆರ್. ಆಶೋಕ್ ಬಲಿಗೆ ಆರ್​ಎಸ್ಎಸ್ ಹುನ್ನಾರ ಮಾಡಿದೆ: ಹೆಚ್. ವಿಶ್ವನಾಥ್

ಸಚಿವರಾದ ಆರ್​ ಅಶೋಕ್​ ಮತ್ತು ವಿ ಸೋಮಣ್ಣ ಅವರಿಗೆ ಎರಡೆರಡು ಕಡೆ ಟಿಕೆಟ್​ ಕೊಟ್ಟಿರುವುದು ಆರ್​ಎಸ್​ಎಸ್​ ಹುನ್ನಾರ ಎಂದು ಹೆಚ್​ ವಿಶ್ವನಾಥ್​ ವಿಶ್ಲೇಷಣೆ ಮಾಡಿದ್ದಾರೆ.

Etv Bharath-vishwanath-reaction-on-bjp-leaders-and-rss
ಸೋಮಣ್ಣ ಮತ್ತು ಆರ್. ಆಶೋಕ್ ಬಲಿಗೆ ಆರ್​ಎಸ್ಎಸ್ ಹುನ್ನಾರ ಮಾಡಿದೆ:ಹೆಚ್.ವಿಶ್ವನಾಥ್

ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್

ಮೈಸೂರು: ಲಿಂಗಾಯತ ಹಾಗೂ ಒಕ್ಕಲಿಗರ ಎಮ್​ಎಲ್ಎಗಳು ಬಿಜೆಪಿಗೆ ಬೇಕು. ಆದರೆ ಈ ಸಮುದಾಯದ ಪ್ರಬಲ ನಾಯಕರು ಬಿಜೆಪಿಗೆ ಬೇಕಿಲ್ಲ. ಆದ್ದರಿಂದ ವಿ. ಸೋಮಣ್ಣ ಹಾಗೂ ಆರ್. ಅಶೋಕ್ ಅವರನ್ನು ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವಂತೆ ಮಾಡಿ, ಅವರನ್ನು ಬಲಿ ಪಡೆಯಲು ಆರ್​ಎಸ್​ಎಸ್ ಹುನ್ನಾರ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಆರೋಪಿಸಿದರು.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೋಮಣ್ಣ ಅವರನ್ನು ವರುಣದಲ್ಲಿ ಸಿದ್ದರಾಮಯ್ಯ ವಿರುದ್ಧ ನಿಲ್ಲಿಸಿದ್ದಾರೆ, ಸಿದ್ದರಾಮಯ್ಯ ಅವರಿಗೆ ಮೊದಲಿನಿಂದಲೂ ವೀರಶೈವ ಸ್ವಾಮೀಜಿಗಳು ಆಶೀರ್ವಾದ ಮಾಡಿಕೊಂಡು ಬಂದಿದ್ದಾರೆ. ಅಲ್ಲಿ ಸೋಮಣ್ಣ ಅವರು ಏನಾಗುತ್ತಾರೋ ಗೊತ್ತಿಲ್ಲ. ಆರ್​ಎಸ್​ಎಸ್​ಗೆ ಈ ಜಾತಿ-ಜನಾಂಗದ ಎಂಎಲ್​ಎಗಳು ಬೇಕು, ನಾಯಕರು ಬೇಕಿಲ್ಲ ಎಂದು ಟೀಕಿಸಿದರು.

ನಾಯಕತ್ವವನ್ನು ಮುರಿಯುವಂತ ಕೆಲಸವನ್ನು ಮಾಡುತ್ತಿದ್ದಾರೆ, ಆರ್​ ಅಶೋಕ್​ರನ್ನು ಡಿ ಕೆ ಶಿವಕುಮಾರ್​ ವಿರುದ್ಧ ನಿಲ್ಲಿಸಿದ್ದಾರೆ. ಇವರ ಹುನ್ನಾರದಿಂದ ಸೋತರೆ? ಎಂದು ಪ್ರಶ್ನಿಸಿದರು. ಇಲ್ಲಿ ಸೌಹಾರ್ದತೆಯನ್ನು ಹಾಳು ಮಾಡುತ್ತಿದ್ದಾರೆ. ಜಾತಿ-ಜಾತಿ. ಧರ್ಮ-ಧರ್ಮಗಳ ನಡುವೆ ಜಗಳ ತಂದಿಡುತ್ತಿದ್ದಾರೆ. ಆರ್​ಎಸ್​ಎಸ್​ನ ಒಳ ಹುನ್ನಾರ ಬಯಲಾಗುತ್ತಿದೆ. ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.​

ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ದಿವಂಗತ ರಾಜಶೇಖರ್​ ರೆಡ್ಡಿಯವರು ಅವರು ಅಲ್ಪಸಂಖ್ಯತರಿಗೆ 5% ಮೀಸಲಾತಿಯನ್ನು ಕೊಟ್ಟಿದ್ದರು, ಅದಕ್ಕೆ ಯಾವ ಆಧಾರವು ಇರಲಿಲ್ಲ, ಅದೇ ರೀತಿ ರಾಜ್ಯ ಸರ್ಕಾರ ನೀಡಿರುವ ಮೀಸಲಾತಿಗೆ ಯಾವ ಆಧಾರವು ಇಲ್ಲ ಮತ್ತು ವರದಿಗಳು ಇಲ್ಲ. ಆಂಧ್ರ ಪ್ರದೇಶದ ಆ ತೀರ್ಮಾನವನ್ನು ಸುಪ್ರೀಂ ಕೋರ್ಟ್​ ಒಡೆದುಹಾಕಿತ್ತು. ಆದೇ ರೀತಿ ರಾಜ್ಯ ಸರ್ಕಾರ ಮಾಡಿರುವ ಮೀಸಲಾತಿಯನ್ನು ಒಡೆದುಹಾಕುತ್ತಿದೆ ಎಂದರು.

ಸರ್ಕಾರ ಮೀಸಲಾತಿ ತೀರ್ಮಾನವನ್ನು ಹಿಂಪಡೆಯಬೇಕು - ಹೆಚ್​ ವಿಶ್ವನಾಥ್: ಜನ ದಡ್ಡರು ನಾವು ಹೇಳಿದ್ದೆಲ್ಲಾ ಒಪ್ಪಿಕೊಳ್ಳುತ್ತಾರೆ ಎನ್ನುವುದು ಸಂವಿಧಾನ ವಿರೋಧಿ ನಡೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಸವೇಶ್ವರರಿಗೆ ಮಾಡಿದ ಅಪಮಾನ ಇದು. ಇವ ನಮ್ಮವ, ಇವ ನಮ್ಮವ ಎಂದೆನಿಸಯ್ಯ ಎಂದು ಬಸವಣ್ಣ ಹೇಳಿದ್ದರು. ಆದರೆ ಇವರು ನಮ್ಮವ ಅಲ್ಲಾ ಎಂದರು. ಮುಸ್ಲಿಮರಿಗೆ ಮೂರು ದಶಕಗಳಿಂದ 4% ಮೀಸಲಾತಿ ನೀಡುತ್ತಿರುವುದನ್ನು ಕಿತ್ತು. ಬಲಿಷ್ಠ ಸಮುದಾಯಗಳಿಗೆ ಕೊಡುವ ಅವಶ್ಯಕತೆ ಏನಿತ್ತು. ಸುಪ್ರೀಂ ಕೋರ್ಟ್​ ಮೀಸಲಾತಿಯನ್ನು ದೋಷಪೂರಿತ ಎಂದು ಮೊನ್ನೆ ಹೇಳಿದೆ. ಹೀಗಾಗಿ ಸರ್ಕಾರ ಮೀಸಲಾತಿ ತೀರ್ಮಾನವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಈ ಚುನಾವಣೆಯಲ್ಲಿ ಯಡಿಯೂರಪ್ಪನವರ ಪಾತ್ರ ಏನು ಇಲ್ಲ- ಹೆಚ್​ ವಿಶ್ವನಾಥ್ :ಈ ಚುನಾವಣೆಯಲ್ಲಿ ಯಡಿಯೂರಪ್ಪ ಪಾತ್ರ ಏನು ಎಂಬ ಪ್ರಶ್ನೆಗೆ ಉತ್ತರ ನೀಡಿದ ವಿಶ್ವನಾಥ್, ಈ ಚುನಾವಣೆಯಲ್ಲಿ ಯಡಿಯೂರಪ್ಪನವರ ಪಾತ್ರ ಏನು ಇಲ್ಲ. ಸುಮ್ಮನೆ ಕುಳಿತಿರಬೇಕು ಅಷ್ಟೇ. ಅವನ್ಯಾರೋ ಸಂತೋಷ್ ಜಿ ಎಂಬ ವ್ಯಕ್ತಿ ಕರ್ನಾಟಕದ ಬಿಜೆಪಿಯನ್ನು ಹಾಳು ಮಾಡುತ್ತಿದ್ದಾನೆ ಎಂದರು.

ಇದನ್ನೂ ಓದಿ:ಸಿದ್ದರಾಮಯ್ಯ ಮನವೊಲಿಸಿದ ಹೈಕಮಾಂಡ್​; ಕೋಲಾರ ಕ್ಷೇತ್ರದಿಂದ ಕೊತ್ತೂರು ಮಂಜುನಾಥ್ ಕಣಕ್ಕೆಎಂದು ವಿಶ್ವನಾಥ್ ವಾಗ್ದಾಳಿ ನಡೆಸಿದರು.

Last Updated : Apr 15, 2023, 9:12 PM IST

ABOUT THE AUTHOR

...view details