ಮೈಸೂರು: ಪುಂಡ ಪೋಕರಿ ಮೊಟ್ಟೆ ಎಸೆದಿರುವುದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳುವುದು ಸರಿಯಲ್ಲ. ಕೂಡಲೇ ಮಡಿಕೇರಿ ಚಲೋ ಕೈ ಬಿಡಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಮನವಿ ಮಾಡಿದರು.
ಕಾಡಾ ಕಚೇರಿಯಲ್ಲಿರುವ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಯಡಿಯೂರಪ್ಪ, ಎಸ್ ಎಂ ಕೃಷ್ಣ ಮಧ್ಯಸ್ಥಿಕೆ ವಹಿಸಿ ಎರಡೂ ಕಡೆಯವರನ್ನೂ ಕೂರಿಸಿ ಮಾತನಾಡಬೇಕು. ನಾಡಿನಲ್ಲಿ ಶಾಂತಿ ನೆಲೆಸಲು ಬೇಕು ಎಂದರು.
ಇದನ್ನೂ ಓದಿ:ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ: ಕೊಡಗಿನಲ್ಲಿ ಅಶಾಂತಿಯ ವಾತಾವರಣ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ವಿಚಾರ ಬಹಳ ದೊಡ್ಡದಾಗಿದೆ. ಕಾಂಗ್ರೆಸ್ ಕಾರ್ಯಕರ್ತರ ಜೊತೆ ಕೊಡಗಿಗೆ ಮುತ್ತಿಗೆ ಹಾಕ್ತೀವಿ ಎಂದು ಅವರು ಹೇಳಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷದಲ್ಲಿ ಸಂಘಟನೆ ಜೋರಾಗ್ತಿದೆ. ಸಿದ್ದರಾಮಯ್ಯ ರಾಜಕೀಯ ಮುತ್ಸದ್ಧಿ, ಏಳು-ಬೀಳು ಕಂಡವರು. ಮೊಟ್ಟೆ ಎಸೆದಿರುವುದು ಸರಿ ಅಂತಾ ನಾವು ಯಾರೂ ಹೇಳುತ್ತಿಲ್ಲ. ಮುಖ್ಯಮಂತ್ರಿ ಬೊಮ್ಮಾಯಿ, ಯಡಿಯೂರಪ್ಪ ಕೂಡ ಘಟನೆಯನ್ನು ಖಂಡಿಸಿದ್ದಾರೆ ಎಂದು ಹೇಳಿದರು.
ಮೊಟ್ಟೆ ವಿಚಾರ ರಾಷ್ಟ್ರೀಯ ಮಟ್ಟದ ಸುದ್ದಿ ಆಗಿದೆ. ಪ್ರವಾಹದಿಂದಾಗಿ ಜನ ಸಮಸ್ಯೆಗೆ ಸಿಲುಕಿದ್ದಾರೆ. ಮೊಟ್ಟೆ ಎಸೆದದ್ದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಮಡಿಕೇರಿ ಚಲೋ ಮಾಡುವುದು ನಿಮ್ಮಂತ ನಾಯಕರಿಗೆ ಶೋಭೆ ತರುವುದಿಲ್ಲ. ರಾಜ್ಯದ ಸಮಸ್ಯೆಗಳನ್ನ ಪ್ರತಿಷ್ಠೆಯಾಗಿ ತಗೆದುಕೊಳ್ಳಿ. ಈ ಬಗ್ಗೆ ಸದನದಲ್ಲಿ ಮಾತನಾಡಿ ಎಂದು ಸಲಹೆ ನೀಡಿದರು.
ಈ ಹಿಂದೆ ಇಂದಿರಾ ಗಾಂಧಿ ಮೇಲೆ ಸಾಕಷ್ಟು ಅಟ್ಯಾಕ್ ಆಗಿತ್ತು, ಮೂಗು ಒಡೆದಿತ್ತು. ಹಾಸನದಲ್ಲಿ ನಡೆದ ಸಭೆ ವೇಳೆ ಹಾವುಗಳನ್ನು ಬಿಟ್ಟಿದ್ರು. ಚಿದಂಬರಂಗೆ ಪ್ರೆಸ್ ಕಾನ್ಫರೆನ್ಸ್ ಮಾಡುವಾಗ ಒಬ್ಬ ಶೂ ತೋರಿಸಿದ್ದ. ಇವೆಲ್ಲವೂ ಜನ ತಂತ್ರ ವ್ಯವಸ್ಥೆಯ ಜನಾಕ್ರೋಶದ ಉದಾಹರಣೆಗಳು ಎಂದರು.
ಇದನ್ನೂ ಓದಿ:ಜನ ಆಕ್ರೋಶದಲ್ಲಿ ಕಲ್ಲು ಬೀಸುವುದು, ಮೊಟ್ಟೆ ಎಸೆಯುವುದು ಸಾಮಾನ್ಯ: ವಿಶ್ವನಾಥ್ ಪ್ರತಿಕ್ರಿಯೆ