ಕರ್ನಾಟಕ

karnataka

ETV Bharat / state

ಹುಣಸೂರು ಜಿಲ್ಲೆಯ ಬಗ್ಗೆ ಮತ್ತೆ ಧ್ವನಿ ಎತ್ತಿದ ಹೆಚ್ ವಿಶ್ವನಾಥ್..

6 ತಾಲೂಕಿನ ಜನಪ್ರತಿನಿಧಿಗಳು, ಮುಖಂಡರು, ಶಾಸಕರು ಪ್ರಮುಖ ಮುಖಂಡರ ಸಭೆ ನಡೆಸಲಾಗುತ್ತೆ. ಹುಣಸೂರು ತಾಲೂಕನ್ನು ಜಿಲ್ಲೆಯಾಗಿಸುವ ಬಗೆಗಿನ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲಾಗುತ್ತೆ.

H . Vishwanath pressmeet in Hunsuru
ಎಚ್.ವಿಶ್ವನಾಥ್ ಸುದ್ದಿಗೋಷ್ಟಿ

By

Published : May 11, 2020, 12:02 PM IST

ಮೈಸೂರು:ದೇವರಾಜ ಅರಸು ಅವರ ಹೆಸರು ಅಜರಾಮರವಾಗಬೇಕಾದರೆ ಹುಣಸೂರು ದೇವರಾಜ ಅರಸು ಜಿಲ್ಲೆಯಾಗಬೇಕು. ಈ‌ ಬಗ್ಗೆ ಸಿಎಂ ಬಳಿ ಮಾತನಾಡಿದ್ದೇನೆ ಎಂದು ಮಾಜಿ ಮಂತ್ರಿ ಹೆಚ್ ವಿಶ್ವನಾಥ್ ಹೇಳಿದ್ದಾರೆ.

ಹುಣಸೂರು ಜಿಲ್ಲೆ ಆಗಬೇಕೆಂಬುದುರ ಕುರಿತಂತೆ ಮಾಜಿ ಸಚಿವ ಹೆಚ್ ವಿಶ್ವನಾಥ್ ಹೇಳಿಕೆ..
ಮಾಜಿ ಸಿಎಂ ದಿ. ದೇವರಾಜ ಅರಸು ಈ ನಾಡಿಗೆ ಅಭೂತಪೂರ್ವ ಸೇವೆ ನೀಡಿದ್ದಾರೆ. ಆದ್ದರಿಂದ ಅವರ ಹೆಸರು ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುವುದಕ್ಕಾಗಿ, ಹುಣಸೂರನ್ನು ದೇವರಾಜ ಅರಸು ಜಿಲ್ಲೆಯಾಗಿ ಮಾಡುವುದರ ಬಗ್ಗೆ ಈಗಾಗಲೇ ಸಿಎಂ ಯಡಿಯೂರಪ್ಪನವರ ಜೊತೆ ಮಾತುಕತೆ ನಡೆಸಿದ್ದೇನೆ ಎಂದ್ರು. ಕೊರೊನಾ ಎಲ್ಲಾ ಮುಗಿದ ಮೇಲೆ ಹುಣಸೂರು ಪಟ್ಟಣದಲ್ಲಿ 6 ತಾಲೂಕಿನ ಜನಪ್ರತಿನಿಧಿಗಳು, ಮುಖಂಡರು, ಶಾಸಕರು ಪ್ರಮುಖ ಮುಖಂಡರ ಸಭೆ ನಡೆಸಿ‌ ಅಲ್ಲಿ ಹುಣಸೂರು ತಾಲೂಕನ್ನು ಜಿಲ್ಲೆಯಾಗಿಸುವ ಬಗೆಗಿನ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ನಂತರ ಸಿಎಂ ಬಳಿ ನಿಯೋಗ ಕರೆದುಕೊಂಡು ಹೋಗುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದೆಂದು ಹೆಚ್ ವಿಶ್ವನಾಥ್ ತಿಳಿಸಿದರು.

ABOUT THE AUTHOR

...view details