ಕರ್ನಾಟಕ

karnataka

ETV Bharat / state

'ಯಡಿಯೂರಪ್ಪನವರೇ ಮಾತಿಗೆ ಕೊಟ್ಟ ಮಗನಾಗಿ, ಮಾತು ತಪ್ಪಿದ ಮಗ ಆಗ್ಬೇಡಿ' - ಕುಮಾರಸ್ವಾಮಿ ವಿರುದ್ಧ ದಂಗೆ

ನನಗೆ ಸಚಿವ ಸ್ಥಾನ ಕೊಡಲೇಬೇಕು ಅಂತ ನಾನು ಹೇಳ್ತಿಲ್ಲ. ಸಚಿವ ಸ್ಥಾನ ಕೊಡುವುದು ನಿಮಗೆ ಬಿಟ್ಟ ವಿಚಾರ. ಆದರೆ ನನ್ನ ಅನುಭವ ಬಳಸಿಕೊಳ್ಳಿ ಎಂದು ಕೇಳುತ್ತಿದ್ದೇನೆ ಅಷ್ಟೇ ಎಂದು ಎಚ್‌.ವಿಶ್ವನಾಥ್‌ ಹೇಳಿದರು.

H Vishwanath
ಎಚ್‌.ವಿಶ್ವನಾಥ್

By

Published : Jun 28, 2020, 1:10 PM IST

ಮೈಸೂರು:ಈ‌ ನಾಡಿನಲ್ಲಿ ನಾಲಿಗೆ ಮೇಲೆ ನಿಂತ ನಾಯಕ ಯಾರಾದರೂ ಇದ್ದರೆ ಅದು ಯಡಿಯೂರಪ್ಪ. ಅವರು ಮಾತಿಗೆ ತಪ್ಪದ ಮಗ. ಕೊಟ್ಟ ಮಾತನ್ನು ಉಳಿಸಿಕೊಳ್ಳುವ ವ್ಯಕ್ತಿ. ಆದರೆ ಮಾತು ತಪ್ಪದ ಮಗನಾಗಬೇಡಿ ಎಂದು ಮಾಜಿ ಸಚಿವ ಎಚ್‌.ವಿಶ್ವನಾಥ್ ಹೇಳಿದರು.

ಮಾಧ್ಯಮದೊಂದಿಗೆ ಮಾತನಾಡಿದ ಹೆಚ್​.ವಿಶ್ವನಾಥ್​

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ಕೊಡಲೇಬೇಕು ಅಂತ ನಾನು ಹೇಳ್ತಿಲ್ಲ. ಸಚಿವ ಸ್ಥಾನ ಕೊಡುವುದು ನಿಮಗೆ ಬಿಟ್ಟ ವಿಚಾರ. ಆದರೆ ನನ್ನ ಅನುಭವ ಬಳಸಿಕೊಳ್ಳಿ ಎಂದು ಕೇಳುತ್ತಿದ್ದೇನೆ ಅಷ್ಟೇ ಎಂದರು.

ಭವಿಷ್ಯದಲ್ಲಿ ನನ್ನ ಹಾದಿ ಸುಗಮವಾಗಿದೆ. ಇದು 40 ವರ್ಷದಿಂದ ನಡೆದು ಬಂದ ಹಾದಿ. ನಾನು ಯಾವ ಪಕ್ಷದಲ್ಲೇ ಇದ್ರೂ ಪಕ್ಷವನ್ನು ಪ್ರೀತಿಸುತ್ತೇನೆ. ಪಕ್ಷದ ನಾಯಕತ್ವದ ನಡವಳಿಕೆ ವಿರುದ್ಧ ಹೋರಾಟ ಮಾಡಿದ್ದೇನೆ. ಬಂಗಾರಪ್ಪ, ವೀರಪ್ಪ ಮೊಯ್ಲಿ ಕಾಲದಲ್ಲೂ ನಾವೇ ಬೆಳೆಸಿದ ಸಿದ್ದರಾಮಯ್ಯನ ವಿರುದ್ಧ ದಂಗೆ ಎದ್ದವನು ನಾನು ಎಂದು ಪರೋಕ್ಷ ಎಚ್ಚರಿಕೆ ನೀಡಿದರು.

ABOUT THE AUTHOR

...view details