ಮೈಸೂರು:ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಇತ್ತೀಚೆಗೆ ನಿಧನರಾದ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಹಾಡುಗಳನ್ನು ಹಾಡಿ ವಿಶೇಷ ನಮನ ಸಲ್ಲಿಸಿದರು.
ಎಸ್.ಪಿ.ಬಿಗೆ ಗಾಯನದ ಮೂಲಕ ನಮನ ಸಲ್ಲಿಸಿದ ಎಚ್.ವಿಶ್ವನಾಥ್ - ಮೈಸೂರು ಅಪ್ಡೇಟ್
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಎಸ್.ಪಿ.ಬಿ ಅವರ 'ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ..' ಎಂಬ ಹಾಡನ್ನು ಹಾಡಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
![ಎಸ್.ಪಿ.ಬಿಗೆ ಗಾಯನದ ಮೂಲಕ ನಮನ ಸಲ್ಲಿಸಿದ ಎಚ್.ವಿಶ್ವನಾಥ್ H. Vishwanath who sang the SP Balasubramaniam songs](https://etvbharatimages.akamaized.net/etvbharat/prod-images/768-512-9069345-80-9069345-1601979254936.jpg)
ಎಸ್.ಪಿ.ಬಿ ಗೆ ಗಾಯನದ ಮೂಲಕ ನಮನ ಸಲ್ಲಿಸಿದ ಎಚ್.ವಿಶ್ವನಾಥ್
ಪತ್ರಕರ್ತರ ಭವನದಲ್ಲಿ ಹಳೇ ಬೇರು ಹೊಸ ಚಿಗುರು ಗಾಯಕರ ಗೆಳೆಯರ ಬಳಗದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶ್ವನಾಥ್, ಎಸ್.ಪಿ.ಬಿ ಅವರ 'ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ..' ಎಂಬ ಹಾಡನ್ನು ಹಾಡಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.
ಇತ್ತೀಚೆಗೆ ನಿಧನ ಹೊಂದಿದ ಖ್ಯಾತ ಗಾಯಕ ಎಸ್.ಪಿ.ಬಿ ಅವರಿಗೆ ಗಾಯನದ ಮೂಲಕ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎಸ್.ಪಿ.ಬಿ ಅವರು ತೆಲುಗು ನಾಡಿನಲ್ಲಿ ಹುಟ್ಟಿದ್ರೂ ಅವರು ಹಾಡಿರುವ ಹಾಡುಗಳ ಪೈಕಿ ಶೇ 40% ರಷ್ಟು ಕನ್ನಡದ ಹಾಡುಗಳಿವೆ. ಅವರಿಂದು ದೈಹಿಕವಾಗಿ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿರುವ ಹಾಡುಗಳ ಮೂಲಕವೇ ಜನರ ನೆನಪಿನಲ್ಲಿ ಉಳಿಯುತ್ತಾರೆ ಎಂದರು.