ಕರ್ನಾಟಕ

karnataka

ETV Bharat / state

6 ವರ್ಷಗಳ ನಂತರ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಹಳ್ಳಿಹಕ್ಕಿ: ಸಚಿವ ಕೆ ವೆಂಕಟೇಶ್​ಗೆ ಅಭಿನಂದನೆ - ಸಚಿವ ಕೆ ವೆಂಕಟೇಶ್​

ಕಾಂಗ್ರೆಸ್​ ಭವನದಲ್ಲಿ ಆಯೋಜಿಸಿದ್ದ ಕೃತಜ್ಞತಾ ಸಭೆಯಲ್ಲಿ ಸಚಿವ ಕೆ ವೆಂಕಟೇಶ್​ ಅವರನ್ನು ಸನ್ಮಾನಿಸಲಾಯಿತು.

Congratulations to Minister K Venkatesh
ಸಚಿವ ಕೆ ವೆಂಕಟೇಶ್​ಗೆ ಅಭಿನಂದನೆ

By

Published : Jun 3, 2023, 8:01 PM IST

ಸಚಿವ ವೆಂಕಟೇಶ್​

ಮೈಸೂರು:ಸಿದ್ದರಾಮಯ್ಯನವರ ಮೇಲಿನ ಮುನಿಸಿನಿಂದ 2017ರಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಹೋಗಿದ್ದ ಎಚ್. ವಿಶ್ವನಾಥ್ ಅವರು, 6 ವರ್ಷಗಳ ನಂತರ ಮತ್ತೆ ಕಾಂಗ್ರೆಸ್ ಕಚೇರಿಗೆ ಆಗಮಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದರು. 6 ವರ್ಷಗಳಿಂದ ಇಲ್ಲಿವರೆಗೂ ತಿರುಗಿ ನೋಡದಿದ್ದ ವಿಶ್ವನಾಥ್, ಇತ್ತೀಚಿಗೆ ಮತ್ತೆ ಕಾಂಗ್ರೆಸ್ ಸೇರಿದ ಬಳಿಕ ಇಂದು ಕಾಂಗ್ರೆಸ್ ಕಚೇರಿಗೆ ಆಗಮಿಸಿ, ಇಂದು ಪಿರಿಯಾಪಟ್ಟಣ ಶಾಸಕ, ಸಚಿವ ಕೆ. ವೆಂಕಟೇಶ್ ಅವರ ಅಭಿನಂದನಾ ಕಾರ್ಯದಲ್ಲಿ ಭಾಗಿಯಾದರು.

ಬೆಂಗಳೂರಿನಿಂದ ಮೈಸೂರಿನ ಕಾಂಗ್ರೆಸ್ ಕಚೇರಿಗೆ ಸಚಿವ ಕೆ. ವೆಂಕಟೇಶ್ ಅವರು ಆಗಮಿಸಿದರು. ಇದೇ ವೇಳೆ ಮುಂಬರುವ ಜೂನ್ 6 ರಂದು ದೇವರಾಜ ಅರಸು ಅವರ ಜನ್ಮದಿನವನ್ನು ಕಾಂಗ್ರೆಸ್ ವತಿಯಿಂದ ಅದ್ಧೂರಿಯಾಗಿ ಆಚರಿಸಲು ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಚನೆ ನೀಡಿ, ರಾಜ್ಯಕ್ಕೆ ಡಿ ದೇವರಾಜ ಅರಸು ಅವರ ಕೊಡುಗೆ ಅಪಾರ. ಅವರಿಗೆ ಗೌರವ ಸಲ್ಲಿಸತಕ್ಕದ್ದು ಎಲ್ಲರ ಕರ್ತವ್ಯ ಎಂದು ವಿಶ್ವನಾಥ್ ಹೇಳಿದರು.

ಕಳೆದ ಆರು ವರ್ಷಗಳಲ್ಲಿ ಬಹಳಷ್ಟು ತಿರುವುಗಳನ್ನು ನಾನು ಕಂಡಿದ್ದೇನೆ. ಕಾಂಗ್ರೆಸ್ ಬಿಟ್ಟು ಜೆಡಿಎಸ್, ಬಿಜೆಪಿಗೆ ಹೋಗಿ ಬಹಳಷ್ಟು ರಾಜಕೀಯ ಬೆಳವಣಿಗೆಗಳಿಗೆ ನಾನು ಕಾರಣನಾಗಿ ಹೋದೆ. ಆರು ವರ್ಷಗಳ ಹಿಂದೆ ನಾನು ಬೇಸತ್ತು ಕಾಂಗ್ರೆಸ್​ಗೆ ರಾಜೀನಾಮೆ ನೀಡಿದಾಗ ಪಕ್ಷದ ರಾಜ್ಯಾಧ್ಯಕ್ಷರಾಗಿದ್ಧ ಜಿ ಪರಮೇಶ್ವರ್​ ಅವರು ಯಾಕೆ ರಾಜೀನಾಮೆ ಕೊಡ್ತಿದೀರಾ ವಿಶ್ವನಾಥ್, ಮುಂದೆ ಎಲ್ಲವನ್ನು ಸರಿಪಡಿಸಿಕೊಂಡು ಹೋಗೋಣ ಎಂದು ಒಂದು ಮಾತನ್ನು ಹೇಳಲಿಲ್ಲ. ಯಾವುದೇ ಪ್ರತಿಕ್ರಿಯೆ ನೀಡದೇ ನನ್ನ ರಾಜೀನಾಮೆ ಅಂಗೀಕರಿಸಿ ಬಿಟ್ಟರು. ಪರಿಣಾಮ ನಾನು ವಿಧಿಯಿಲ್ಲದೇ ಬೇರೆ ಪಕ್ಷ ಸೇರಬೇಕಾಯಿತು ಎಂದು ಅಂದಿನ ಸನ್ನಿವೇಶವನ್ನು ನೆನೆದರು.

ನೂತನ ಸಚಿವ ಕೆ.ವೆಂಕಟೇಶ್‌ಗೆ ಸನ್ಮಾನ:ರಾಜ್ಯ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಲು ಎಲ್ಲ ಕಾರ್ಯಕರ್ತರು ಸಹಕರಿಸಿಬೇಕು, ಕಾರ್ಯಕ್ರಮಗಳಲ್ಲಿ ಮತ್ತಷ್ಟು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಪಶುಸಂಗೋಪನ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಮನವಿ ಮಾಡಿದರು. ನಗರ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಕಾಂಗ್ರೆಸ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕೃತಜ್ಞತಾ ಸಭೆಯಲ್ಲಿ ಅವರು ಸನ್ಮಾನ ಸ್ವೀಕರಿಸಿ ಮತ್ತು ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ, ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಅವರು ಮಾತನಾಡಿದರು.

ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಾಣಾಳಿಕೆಯಲ್ಲಿ ನೀಡಿದ್ದ ಗ್ಯಾರಂಟಿ ಯೋಜನೆಗಳ ಭರವಸೆಯನ್ನು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಘೋಷಣೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನಪರವಾಗಿ ಕೆಲಸ ಮಾಡುತ್ತಿರುವುದರಿಂದ ಸರ್ಕಾರದ ಮೇಲೆ ಜನರಿಗೆ ಮತ್ತಷ್ಟು ನಂಬಿಕೆ ಬಂದಿದೆ ಎಂದರು. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿರುವುದರಿಂದ, ಇದಕ್ಕೆ ಸುಮಾರು 57 ಸಾವಿರ ಕೋಟಿ ಹೊರೆಯಾಗಲಿದೆ. ಇದನ್ನೆಲ್ಲ ಹೇಗೆ ಸರಿ ತೂಗಿಸಬೇಕು ಎಂಬ ಚಿಂತನಾ ಕ್ರಮಗಳೊಂದಿಗೆ ಘೋಷಣೆ ಮಾಡಿದೆ. ಹಾಗಾಗಿ, ಈಗ ಇಡೀ ದೇಶ ರಾಜ್ಯದ ಆಡಳಿತದತ್ತ ತಿರುಗಿ ನೋಡುತ್ತಿದೆ ಎಂದು ಹೇಳಿದರು.

ಸಿದ್ದರಾಮಯ್ಯ 2013ರಲ್ಲಿ ಮುಖ್ಯಮಂತ್ರಿಯಾದ ವೇಳೆ ಯಾವುದೇ ಆರೋಪ ಇಲ್ಲದೇ, ಎಲ್ಲ ವರ್ಗದವರ ವಿಶ್ವಾಸದೊಂದಿಗೆ ಉತ್ತಮ ಆಡಳಿತ ನೀಡಿದ್ದರು. ಅವರ ಅಂದಿನ ಆಡಳಿತಾವಧಿಯಲ್ಲಿ ಯಾವುದೇ ಆರೋಪಗಳು ಇಲ್ಲ. ಅವರು ಸ್ವಚ್ಛ ವ್ಯಕ್ತಿತ್ವವನ್ನು ಉಳಿಸಿಕೊಂಡಿರುವವರು. ಹಾಗಾಗಿಯೇ, ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು ಎಂದು ಜನರು ಬಯಸಿದ್ದರು ಎಂದು ತಿಳಿಸಿದರು.

ಇದನ್ನೂ ಓದಿ:ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರ ಆರ್ಥಿಕ ಹೊರೆ ತಗ್ಗಿಸಲು ಗ್ಯಾರಂಟಿ ಯೋಜನೆ : ಡಿ ಕೆ ಶಿವಕುಮಾರ್​

ABOUT THE AUTHOR

...view details