ಮೈಸೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ನಾನು ವೈಯಕ್ತಿಕವಾಗಿ ಟೀಕೆ ಮಾಡಿಲ್ಲ, ಅವರ ಶಕ್ತಿ ಕೇಂದ್ರದ ಆಡಳಿತದ ಬಗ್ಗೆ ನಾನು ಟೀಕೆ ಮಾಡಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಸ್ಪಷ್ಟಪಡಿಸಿದರು.
ಜಲದರ್ಶಿನಿ ಅತಿಥಿ ಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಧಾನಸೌಧ/ಶಕ್ತಿಕೇಂದ್ರದಲ್ಲಿನ ಪೀಠದ ಜವಾಬ್ದಾರಿಯನ್ನು ಎಚ್ಚರಿಸಿದ್ದೇನೆಯೇ ಹೊರತು ವೈಯುಕ್ತಿಕ ಟೀಕೆ ಮಾಡಿಲ್ಲ. ಸಚಿವ ಸೋಮಶೇಖರ್‌ಗೆ ಇದೆಲ್ಲ ಗೊತ್ತಿಲ್ವಾ?, ತಮ್ಮ ವಿರುದ್ಧ ಟೀಕೆ ಮಾಡಿದ ಎಂಪಿ, ಸಚಿವರು ಹಾಗೂ ಶಾಸಕರ ವಿರುದ್ಧ ಟೀಕಿಸಿದರು. ಎಂಎಲ್‌ಸಿ ಮಾಡಿದ್ದೇ ದೊಡ್ಡದು ಎನ್ನುವುದಾದ್ರೆ ಸರ್ಕಾರ ತಂದವರು ಯಾರು? ನನ್ನ ತ್ಯಾಗ ಏಕೆ ನೆನೆಸಲ್ಲ ಎಂದು ಪ್ರಶ್ನಿಸಿದರು.
ಎಸ್.ಆರ್.ವಿಶ್ವನಾಥ್ ಭೂಗಳ್ಳ:ಯಲಹಂಕ ಶಾಸಕ ಎಸ್ಆರ್ ವಿಶ್ವನಾಥ್ ಒಬ್ಬ ನೆಲಗಳ್ಳ. ಸರ್ಕಾರಿ ಜಾಗಕ್ಕೆ ಬೇಲಿ ಹಾಕುವ ಭೂಗಳ್ಳ. ನನ್ನ ರಾಜಕೀಯ ಚರಿತ್ರೆ ಏನು? ನೆಲಗಳ್ಳನ ಚರಿತ್ರೆ ಏನು ಎಂದು ಅವರ ವಿರುದ್ಧ ಗರಂ ಆದರು.
ಚಾಮರಾಜನಗರ ದುರಂತ ಒಂದು ಕೊಲೆ: ಇಬ್ಬರು ಡಿಸಿಗಳಿಗೆ ಶಟ್ಅಪ್ ಅಂತಾ ಹೇಳುವ ಧೈರ್ಯ ಸಿಎಂಗೆ ಇಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಮರ್ಯಾದೆ ಹೋಗಿದೆ. ನಾನೊಬ್ಬ ವಿಧುರನಾಗಿ ದೃತರಾಷ್ಟ್ರನಿಗೆ ಬುದ್ಧಿ ಹೇಳಿದ್ದೇನೆ. ಶಕುನಿಗಳನ್ನು, ಮೆಚ್ಚಿಸುವವರನ್ನ ನಂಬಬೇಡಿ. ಬಿಎಸ್‌ವೈ ಪುತ್ರ ವಾತ್ಸಲ್ಯ ಬಿಡಬೇಕು. ಅಂದು ವಿಧುರ ಕುರುಕ್ಷೇತ್ರ ಯುದ್ಧ ಬೇಡ ಅಂತಾ ಹೇಳಿದ್ದ. ವಿಧುರನ ಸ್ಥಾನದಲ್ಲಿ ನಿಂತು ನಾನು ಮಾತನಾಡಿದ್ದೇನೆ ಎಂದರು.