ಮೈಸೂರು :ನಾನು ಯಾರಪ್ಪನ ಮರ್ಜಿಯಲ್ಲಿ ಇಲ್ಲ. ಇಡೀ ಸರ್ಕಾರವೇ ನಮ್ಮ ಮರ್ಜಿಯಲಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಮತ್ತೊಮ್ಮೆ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಇಂದು ಪಿರಿಯಾಪಟ್ಟಣದಲ್ಲಿ ಮಾತನಾಡಿದ ಹೆಚ್ ವಿಶ್ವನಾಥ್, ನಾವು ಯಾರ ಹಂಗಿನಲ್ಲೂ ಇಲ್ಲ. ಸರ್ಕಾರ, ಮಂತ್ರಿಗಳು ಹಾಗೂ ನಿಗಮ ಮಂಡಳಿಯ ಅಧ್ಯಕ್ಷರು ಇವರೆಲ್ಲ ನಮ್ಮ ತ್ಯಾಗದ ಮೇಲೆ ಅಧಿಕಾರಕ್ಕೆ ಬಂದಿದ್ದಾರೆ ಎಂದರು.
ಮುಖ್ಯಮಂತ್ರಿ ಆದಿಯಾಗಿ ಇಡೀ ಸರ್ಕಾರವೇ ನಮ್ಮ ಮರ್ಜಿಯಲ್ಲಿದೆ : ಹೆಚ್ ವಿಶ್ವನಾಥ್ ಗುಟುರು - ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್
ಸರ್ಕಾರ ಹಾಗೂ ಸಿಎಂ ಬಿಎಸ್ವೈ ವಿರುದ್ಧ ಒಂದಿಲ್ಲೊಂದು ಹೇಳಿಕೆ ನೀಡುತ್ತಿರುವ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಇದೀಗ ಮತ್ತೆ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಈ ಸರ್ಕಾರ ನಮ್ಮ ತ್ಯಾಗದಿಂದ ಬಂದಿದೆ, ನಾವ್ಯಾರೂ ಅವರ ಹಂಗಿನಲ್ಲಿಲ್ಲ ಎಂದಿದ್ದಾರೆ..

ಹೆಚ್ ವಿಶ್ವನಾಥ್
ಸರ್ಕಾರದ ವಿರುದ್ಧ ಹೆಚ್ ವಿಶ್ವನಾಥ್ ವಾಗ್ದಾಳಿ
ಮಂತ್ರಿ, ಮುಖ್ಯಮಂತ್ರಿ ನಮ್ಮ ತ್ಯಾಗದಿಂದ ಬಂದವರಾಗಿದ್ದಾರೆ. ನಮ್ಮ ಮರ್ಜಿಯಲ್ಲೇ ಮುಖ್ಯಮಂತ್ರಿಗಳು ಇದ್ದಾರೆ, ನಾವು ಯಾರ ಮರ್ಜಿಯಲ್ಲೂ ಇಲ್ಲ. ನಮ್ಮ ತ್ಯಾಗದಿಂದ ನಾನು ವಿಧಾನ ಪರಿಷತ್ ಸದಸ್ಯನಾಗಿದ್ದಾನೆ, ಇವರಿಗೆ ಅಧಿಕಾರ ಸಿಕ್ಕಿದೆ ಎಂದು ಹೆಚ್ ವಿಶ್ವನಾಥ್ ಸ್ವಪಕ್ಷೀಯರ ವಿರುದ್ಧವೇ ಗುಡುಗಿದರು.
ಓದಿ:ಮೈಸೂರಿನಲ್ಲಿ ಐಎಂಎಫ್ ಮುಖ್ಯ ಆರ್ಥಿಕ ಸಲಹೆಗಾರ್ತಿಯನ್ನು ಭೇಟಿಯಾದ ಕುರುಬೂರು