ಮೈಸೂರು: ದಕ್ಷಿಣ ಕೊರಿಯಾದಲ್ಲಿ ಸೆಪ್ಟಂಬರ್ 5 ರಿಂದ 8 ರವರೆಗೆ ನಡೆಯಲಿರುವ 9ನೇ ಏಷ್ಯನ್ ಯೋಗಾಸನ ಸ್ಪರ್ಧೆಯಲ್ಲಿ ಮೈಸೂರಿನ ಹೆಚ್. ಖುಷಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಏಷ್ಯನ್ ಯೋಗ ಸ್ಪರ್ಧೆ: ಭಾರತವನ್ನು ಪ್ರತಿನಿಧಿಸಲಿದ್ದಾರೆ ಮೈಸೂರಿನ ಖುಷಿ - H. Khushi from Mysore
ಮೈಸೂರಿನವರಾದ ಹೆಚ್. ಖುಷಿ ಈಗಾಗಲೇ ಯೋಗಾಸನ ಸ್ಪರ್ಧೆಯಲ್ಲಿ ಹಲವಾರು ದಾಖಲೆಗಳನ್ನು ಮಾಡಿ ಹೆಸರು ಮಾಡಿದ್ದು, ಇನ್ನು ದಕ್ಷಿಣ ಕೊರಿಯಾದಲ್ಲಿ ಸೆಪ್ಟಂಬರ್ 5 ರಿಂದ 8 ರವರೆಗೆ ನಡೆಯಲಿರುವ 9ನೇ ಏಷ್ಯನ್ ಯೋಗಾಸನ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
![ಏಷ್ಯನ್ ಯೋಗ ಸ್ಪರ್ಧೆ: ಭಾರತವನ್ನು ಪ್ರತಿನಿಧಿಸಲಿದ್ದಾರೆ ಮೈಸೂರಿನ ಖುಷಿ](https://etvbharatimages.akamaized.net/etvbharat/prod-images/768-512-4274870-thumbnail-3x2-mysuru.jpg)
ಹೆಚ್. ಖುಷಿ
ಏಷ್ಯನ್ ಯೋಗ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಮೈಸೂರಿನ ಹೆಚ್. ಖುಷಿ
ಮೂಲತಃ ಮೈಸೂರಿನವರಾದ ಹೆಚ್. ಖುಷಿ ಈಗಾಗಲೇ ಯೋಗಾಸನ ಸ್ಪರ್ಧೆಯಲ್ಲಿ ಹಲವಾರು ದಾಖಲೆಗಳನ್ನು ಮಾಡಿ ಹೆಸರು ಮಾಡಿದ್ದು, ಸದ್ಯ ಏಷ್ಯನ್ ಯೋಗಾಸನ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಇಲ್ಲಿಯವರೆಗೆ ಯೋಗಾಸನ ಸ್ಪರ್ಧೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ 7 ಚಿನ್ನ, 4 ಬೆಳ್ಳಿ ಹಾಗೂ 2 ಕಂಚಿನ ಪದಕಗಳಿಗೆ ಕೊರಳನೊಡ್ಡಿರುವ ಹೆಚ್.ಖುಷಿ ಮುಂಬರುವ ದಿನಗಳಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ 9ನೇ ಏಷ್ಯನ್ ಯೋಗಾಸನ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.