ಕರ್ನಾಟಕ

karnataka

ETV Bharat / state

ಡಿಕೆಶಿ ಸಿಎಂ ಆಗಬೇಕೆಂಬ ಆಸೆ ಹೊಂದಿದ್ದು, ನಾನೇಕೆ ಹೊಟ್ಟೆ ಕಿಚ್ಚು ಪಟ್ಟುಕೊಳ್ಳಲಿ..ಹೆಚ್​ ಡಿ ಕುಮಾರಸ್ವಾಮಿ - ಬಿಜೆಪಿ ಸರ್ಕಾರದ ಬಗ್ಗೆ ಜನರಲ್ಲಿ ಅತ್ಯಂತ ಕೆಟ್ಟ ಅಭಿಪ್ರಾಯ

ಇಂದು ಹುಣಸೂರಿನಲ್ಲಿ ಡಿ ಕೆ ಶಿವಕುಮಾರ್ ಜೊತೆ ಹೆಚ್​ ಡಿ ಕುಮಾರಸ್ವಾಮಿ ವೇದಿಕೆ ಹಂಚಿಕೊಳ್ಳಲಿದ್ದಾರೆ. ಈ ಹಿನ್ನೆಲೆ ಮಾಧ್ಯಮಗಳೊಂದಿಗೆ ಅಭಿಪ್ರಾಯ ಹಂಚಿಕೊಂಡ ಹೆಚ್​ಡಿಕೆ, ಡಿ.ಕೆ ಶಿವಕುಮಾರ್ ಒಂದು ಪಕ್ಷದ ಅಧ್ಯಕ್ಷರು ಅವರು ಮುಖ್ಯಮಂತ್ರಿ ಆಗಬೇಕೆಂಬ ಆಸೆ ಹೊಂದಿದ್ದು, ಈ ಬಗ್ಗೆ ನಾನೇಕೆ ಹೊಟ್ಟೆ ಕಿಚ್ಚು ಪಟ್ಟುಕೊಳ್ಳಲಿ. ಎಲ್ಲಾ ದೇವರ ಇಚ್ಛೆ, ದೇವರು ಬಯಸಿದಂತೆ ಆಗುತ್ತದೆ ಎಂದರು.

h d kumaraswamy
ಹೆಚ್​ ಡಿ ಕುಮಾರಸ್ವಾಮಿ

By

Published : Aug 26, 2022, 12:23 PM IST

ಮೈಸೂರು: ಡಿ ಕೆ ಶಿವಕುಮಾರ್ ಒಂದು ಪಕ್ಷದ ಅಧ್ಯಕ್ಷರಾಗಿದ್ದು ಮುಖ್ಯಮಂತ್ರಿ ಆಗಬೇಕೆಂಬ ಆಸೆ ಹೊಂದಿದ್ದಾರೆ. ನಾನು ಅವರ ಜೊತೆ ವೇದಿಕೆ ಹಂಚಿಕೊಳ್ಳುತ್ತಿರುವುದಕ್ಕೆ ಬೇರೆ ಅರ್ಥ ಕಲ್ಪಿಸಬೇಡಿ. ಅವರ ಬಗ್ಗೆ ಸಿಂಪತಿ ಇಲ್ಲ, ಮುಂದೆ ಮುಖ್ಯಮಂತ್ರಿ ಯಾರಾಗಬೇಕು ಎಂಬುದು ಭಗವಂತನ ಇಚ್ಛೆಗೆ ಬಿಟ್ಟದ್ದು ಎಂದು ಮೈಸೂರಿನಲ್ಲಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.

ಇಂದು ಹುಣಸೂರಿನಲ್ಲಿ ಡಿ.ಕೆ ಶಿವಕುಮಾರ್ ಜೊತೆ ಹೆಚ್​ಡಿಕೆ ವೇದಿಕೆ ಹಂಚಿಕೊಳ್ಳಲಿದ್ದು, ಈ ಬಗ್ಗೆ ಮೈಸೂರಿನ ಖಾಸಗಿ ಹೋಟೆಲ್​ನಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಡಿ.ಕೆ ಶಿವಕುಮಾರ್ ಒಂದು ಪಕ್ಷದ ಅಧ್ಯಕ್ಷರು ಅವರು ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಹೊಂದಿದ್ದು, ಈ ಬಗ್ಗೆ ನಾನೇಕೆ ಹೊಟ್ಟೆ ಕಿಚ್ಚು ಪಟ್ಟುಕೊಳ್ಳಲಿ. ಎಲ್ಲಾ ದೇವರ ಇಚ್ಛೆ, ದೇವರು ಬಯಸಿದಂತೆ ಆಗುತ್ತದೆ. ನಾನು ಅವರ ಜೊತೆ ಒಳ ಒಪ್ಪಂದ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ, ಜನ ನನ್ನನು ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಾಡಬೇಕೆಂದು ಬಯಸಿದ್ದಾರೆ ಎಂದರು.

ಇದನ್ನೂ ಓದಿ: ಈಗಿನ ಕೈಗಾರಿಕಾ ಸಚಿವರದ್ದು ಬ್ರಹ್ಮಾಂಡ ಭ್ರಷ್ಟಾಚಾರ: ಹೆಚ್ ಡಿ ಕುಮಾರಸ್ವಾಮಿ

40 ಪರ್ಸೆಂಟ್ ಆರೋಪದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಗುತ್ತಿಗೆದಾರ ಸಂಘದವರು ಶೇ 40ರಷ್ಟು ಕಮಿಷನ್​​ ಸರ್ಕಾರ ಎಂದು ಹೇಳಿಕೆ ನೀಡುತ್ತಿದ್ದು, ಈ ವಿಚಾರ ಬಿಜೆಪಿ ಸರ್ಕಾರದ ಬಗ್ಗೆ ಜನರಲ್ಲಿ ಅತ್ಯಂತ ಕೆಟ್ಟ ಅಭಿಪ್ರಾಯ ತರುತ್ತಿದೆ ಎಂಬ ನಂಬಿಕೆ ನನ್ನದು ಎಂದು ಹೇಳಿದರು.

ಈ ಪರ್ಸೆಂಟೇಜ್ ಬ್ರಿಟಿಷರ ಕಾಲದಿಂದಲೂ ಇತ್ತು. ಹಿಂದೆ ಶೇ 2 ರಿಂದ 3 ರಷ್ಟು ಪರ್ಸೆಂಟೇಜ್ ವ್ಯವಸ್ಥೆ ಇತ್ತು. ಆದರೆ ಬಿಜೆಪಿ ಸರ್ಕಾರ 2008 ರಲ್ಲಿ ಬಂದ ನಂತರ ಹಣಕೊಟ್ಟು ಏನು ಬೇಕಾದರೂ ಖರೀದಿ ಮಾಡಬಹುದು ಎಂಬ ಸ್ಥಿತಿಗೆ ತಂದು ನಿಲ್ಲಿಸಿದರು. ಬಿಜೆಪಿಯವರು ಬಂದ ನಂತರ ವ್ಯವಸ್ಥೆಯೇ ಕುಲಗೆಟ್ಟು ಹೋಗಿದೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಕಮಿಷನ್ ಆರೋಪ.. ಗುತ್ತಿಗೆದಾರರಿಗೆ ಮುಖ್ಯವಾದ ಸಲಹೆ ನೀಡಿದ ಕುಮಾರಸ್ವಾಮಿ

ನಾನು ಸಿಎಂ ಆಗಿದ್ದಾಗ, ಲಾಟರಿ ನಿಷೇಧ ಮಾಡಿದಾಗ, ಎಷ್ಟೋ ತರ ಆಫರ್ ಬಂದವು. ಅದಕ್ಕೆ ನಾನು ಬಗ್ಗದೇ ಲಾಟರಿ ನಿಷೇಧ ಮಾಡಿದೆ. ಈ ಎರಡು ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ನವರು ಸೂಟ್ಕೇಸ್ ಕೊಡುವ ಸಂಸ್ಕೃತಿ ಹೊಂದಿದ್ದು, ಇದರಿದಲೇ ಪರ್ಸೆಂಟೇಜ್ ಹೆಚ್ಚಾಗಿದೆ ಎಂದು ಟೀಕಿಸಿದರು.

ಮುನಿರತ್ನ ವಿರುದ್ಧ ಹೆಚ್​ಡಿಕೆ ವಾಗ್ದಾಳಿ: ಮುನಿರತ್ನ ಆರಂಭದಲ್ಲಿ ಗುತ್ತಿಗೆದಾರ, ಈಗ ರಾಜಕಾರಣಿ. ನಿವೃತ್ತ ನ್ಯಾಯಮೂರ್ತಿ ಅವರು ಮುನಿರತ್ನ ವಿರುದ್ಧ ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ವರದಿ ಕೊಟ್ಟರು. ಆದರೆ, ಅದು ಏನಾಯಿತು ಎಂಬುದು ಗೊತ್ತಿಲ್ಲ. ಅವರು ಕಾಮಗಾರಿ ಸೇರಿದಂತೆ ಪರ್ಸೆಂಟೇಜ್ ವ್ಯವಹಾರದಲ್ಲೂ ಪಾತ್ರ ಇದೆ. ಆದರೆ, ಅವರನ್ನು ಏನು ಮಾಡಲು ಆಗುತ್ತಿಲ್ಲ ಏಕೆ ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ:ಸಿಎಂ ಆಗಲು ಯೋಗ, ಯೋಗ್ಯತೆ ಬೇಕು: ಸಚಿವ ಬಿ.ಸಿ ಪಾಟೀಲ್

ಇನ್ನು ಮೈಸೂರು ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ ಸ್ಥಳೀಯ ನಾಯಕರ ತೀರ್ಮಾನದ ಮೇಲೆ ಮೈತ್ರಿ ಮಾಡಿಕೊಳ್ಳಲಾಗುವುದು, ಮೂರು ಪಕ್ಷಕ್ಕೂ ಬಹುಮತ ಇಲ್ಲ. ಜೊತೆಗೆ ಶಾಸಕ ಜಿ.ಟಿ ದೇವೇಗೌಡ ನನ್ನ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಅವರು ಜೆಡಿಎಸ್​ನಲ್ಲೇ ಮುಂದುವರೆಯುತ್ತಾರೆ ಎಂಬ ಸುಳಿವು ನೀಡಿದರು.

ABOUT THE AUTHOR

...view details