ಮೈಸೂರು: ಹುಣಸೂರಿನಲ್ಲಿಂದು ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಜಿ ಟಿ ದೇವೇಗೌಡ ಅವರನ್ನು ಹೆಚ್ ಡಿ ಕುಮಾರಸ್ವಾಮಿ ಸನ್ಮಾನಿಸಿದರು. ಬಹಳ ದಿನಗಳ ನಂತರ ಒಂದೇ ವೇದಿಕೆಯಲ್ಲಿ ಇಬ್ಬರು ಕಾಣಿಸಿಕೊಂಡಿದ್ದು, ಜೆಡಿಎಸ್ನಲ್ಲೇ ಉಳಿಯುವ ಮುನ್ಸೂಚನೆ ನೀಡಿದ್ದಾರೆ.
ಹುಣಸೂರಿನಲ್ಲಿ ಜಿಟಿಡಿ ಸನ್ಮಾನಿಸಿದ ಹೆಚ್‌ಡಿಕೆ: ಜೆಡಿಎಸ್ನಲ್ಲೇ ಉಳಿಯುವ ಮುನ್ಸೂಚನೆ - Kempegowda Jayanti programme in mysore
ಹುಣಸೂರಿನಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಹೆಚ್ ಡಿ ಕುಮಾರಸ್ವಾಮಿ, ಶಾಸಕ ಜಿ ಟಿ ದೇವೇಗೌಡ ಹಾಗೂ ಸಾ ರಾ ಮಹೇಶ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.
ಕೆಂಪೇಗೌಡ ಜಯಂತಿ ಕಾರ್ಯಕ್ರಮ
ಕಳೆದೆರಡು ವರ್ಷಗಳಿಂದಲೂ ಜೆಡಿಎಸ್ ಕಾರ್ಯಕ್ರಮಗಳಿಂದ ದೂರವೇ ಉಳಿದಿದ್ದು, ಕುಮಾರಸ್ವಾಮಿ ಜೊತೆಗೂ ಮುನಿಸಿಕೊಂಡಿದ್ದ ಚಾಮುಂಡೇಶ್ವರಿಯ ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಮೊದಲ ಬಾರಿಗೆ ಹೆಚ್‌ಡಿಕೆ ಹಾಗೂ ಸಾ ರಾ ಮಹೇಶ್ ಜೊತೆ ವೇದಿಕೆ ಹಂಚಿಕೊಂಡಿದ್ದರು. ಈ ಸಂದರ್ಭದಲ್ಲಿ ಕುಮಾರಸ್ವಾಮಿ ಹಾಗೂ ದೇವೇಗೌಡರನ್ನು ವೇದಿಕೆಯ ಭಾಷಣದಲ್ಲೇ ಹೊಗಳಿದ್ದು ಜಿಟಿಡಿ ಜೆಡಿಎಸ್ನಲ್ಲೇ ಉಳಿಯುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ.
ಇದನ್ನೂ ಓದಿ:ಈದ್ಗಾ ಮೈದಾನದಲ್ಲಿ ಗಣೇಶೋತ್ಸವ: ಅವಕಾಶ ಕೊಡದಿದ್ರೆ ಬಿಜೆಪಿ ವಿರುದ್ಧ ಮನೆ ಮನೆ ಪ್ರಚಾರ: ಮುತಾಲಿಕ್