ಕರ್ನಾಟಕ

karnataka

ETV Bharat / state

ಜನತಾದಳ ಮುಗಿಸ್ತೀವಿ ಅನ್ನೋದು ಕನಸಿನ ಮಾತು:ಹೆಚ್.ಡಿ ಕುಮಾರಸ್ವಾಮಿ - ಹುಣಸೂರಿನಲ್ಲಿ ನಡೆದ ಜೆಡಿಎಸ್ ಬಹಿರಂಗ ಸಭೆ

ರಾಜ್ಯ ರಾಜಕಾರಣದಲ್ಲಿ ಶುದ್ಧೀ ಕರಣ ಮಾಡಬೇಕಿದೆ ಎಂದು ಹುಣಸೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ
ಮಾಜಿ ಸಿಎಂ ಕುಮಾರಸ್ವಾಮಿ

By

Published : Dec 3, 2019, 2:58 AM IST

ಮೈಸೂರು : ಉಪಚುನಾವಣೆಯಲ್ಲಿ ಅನರ್ಹ ಶಾಸಕರಿಗೆ ಸರಿಯಾದ ಪಾಠ ಕಲಿಸುವ ಮೂಲಕ ರಾಜ್ಯ ರಾಜಕಾರಣವನ್ನು ಶುದ್ಧೀಕರಣ ಮಾಡಿ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಮತದಾರರಲ್ಲಿ ಮನವಿ ಮಾಡಿದ್ದಾರೆ.

ಹುಣಸೂರಿನಲ್ಲಿ ನಡೆದ ಜೆಡಿಎಸ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಯಾರೇ ಆಗಲಿ ಪಕ್ಷಕ್ಕೆ ಹಾಗೂ ನಾಯಕರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಬಾರದು. ಆ ರೀತಿಯಾಗಿ ತೀರ್ಮಾನ ಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು. ಅನರ್ಹ ಶಾಸಕರೆಲ್ಲಾ ಅಭಿವೃದ್ಧಿಗಾಗಿ ಆಚೆ ಬಂದವರಲ್ಲ‌‌‌, ಅವರು ತಮ್ಮ ಸ್ವಾರ್ಥಕ್ಕಾಗಿ ಮತದಾರರಿಗೆ ಮೋಸ ಮಾಡಿದ್ದಾರೆ ಎಂದು ಕಿಡಿಕಾರಿದರು.

ನಾನು‌ ಮಂತ್ರಿ ಮಂಡಲ ರಚನೆ ಮಾಡಿದಾಗ ಯಾವುದೇ ಅಸಮಾಧಾನ ಇಲ್ಲ ಎಂದವರು, ಕೊನೆಗೆ ಏನು‌ ಮಾಡಿದ್ರು ಎಂದು ಪ್ರಶ್ನಿಸಿದ್ರು. ನಾನು ಸರ್ಕಾರದ ಮನೆ ತೆಗೆದುಕೊಂಡಿರಲಿಲ್ಲ‌‌, ಅದಕ್ಕಾಗಿ ಹೊಟೆಲ್​ನಲ್ಲಿ ಮಧ್ಯಾಹ್ನ ವಿಶ್ರಾಂತಿ ಪಡೆಯುತ್ತಿದ್ದೆ ಅದು ತಪ್ಪಾ? ನನ್ನ ಬಗ್ಗೆ ಮಾತನಾಡುವವರ ವಿರುದ್ಧ ನನಗೆ ಮಾತನಾಡಲು‌ ಅಸಹ್ಯವಾಗುತ್ತದೆ ಎಂದು ಹೇಳಿದರು.

ಮಾಜಿ ಸಿಎಂ ಕುಮಾರಸ್ವಾಮಿ

ಮುಸ್ಲೀಂ ಬಂಧುಗಳು ತೆಗೆದುಕೊಳ್ಳುವ ನಿರ್ಧಾರ ಬಿಜೆಪಿಗೆ ಅನುಕೂಲವಾಗಬಾರದು‌. ಕಾಂಗ್ರೆಸ್​ಗೆ ಮತಕೊಟ್ಟರೆ ಬಿಜೆಪಿಗೆ ಅನುಕೂಲವಾಗುವ ಸೂಚನೆಗಳಿವೆ. ಆದ್ದರಿಂದ ಯೋಚನೆ ಮಾಡಿ ಮತ ನೀಡಬೇಕು‌ ಎಂದರು.

ಇನ್ನು ಯಾವುದೇ ಕ್ಷೇತ್ರದಲ್ಲಾಗಲಿ ಯಾವುದೇ ರೀತಿಯ ಹೊಂದಾಣಿಕೆ ಇಲ್ಲ‌. ಜನತಾ ದಳ ಮುಗಿಸುತ್ತೀವಿ ಅಂತ ಕೆಲವರು ಹೇಳ್ತಿದ್ದಾರೆ. ಅದು ಅಷ್ಟು ಸುಲಭದ ಮಾತಲ್ಲ ಎಂದರು.‌ ಜಾತಿ ಬೇಧ ಮರೆತು‌ ಮತನೀಡಿ‌ ಎಂದು ಕುಮಾರಸ್ವಾಮಿ ಮತದಾರರಲ್ಲಿ ಮನವಿ ಮಾಡಿಕೊಂಡರು.

For All Latest Updates

TAGGED:

ABOUT THE AUTHOR

...view details