ಮೈಸೂರು: ತಮ್ಮ ರಾಜಕೀಯ ಎದುರಾಳಿಗಳನ್ನು ಮಣಿಸಲು ಪ್ರಧಾನಿ ನರೇಂದ್ರ ಮೋದಿಯವರು, ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಐಟಿ, ಇಡಿ, ಸಿಬಿಐ ಸೇರಿದಂತೆ ಎಲ್ಲಾ ತನಿಖಾ ಸಂಸ್ಥೆಗಳನ್ನು ಮೋದಿ ತಮ್ಮ ಹಿತಕ್ಕೆ ಬಳಸಿಕೊಳ್ಳುತ್ತಿದ್ದಾರೆಂದು ಆರೋಪಿಸಿದರು.
ಪರಂ ದಿಢೀರ್ ಆಸ್ತಿ ಮಾಡಿದವರಲ್ಲ, ಅವರ ತಂದೆ ಕಾಲದಿಂದಲೂ ಶ್ರೀಮಂತರು: ದೇವೇಗೌಡ ಕಿಡಿ
ಡಾ. ಜಿ. ಪರಮೇಶ್ವರ್ ದಿಢೀರನೇ ಆಸ್ತಿ ಮಾಡಿದವರಲ್ಲ. ಅವರ ತಂದೆಯ ಕಾಲದಿಂದಲೂ ಅವರು ಶ್ರೀಮಂತರು ಎಂದು ದೇವೇಗೌಡರು ಹೇಳಿದರು. ಬಿಜೆಪಿಯಲ್ಲಿರುವವರೆಲ್ಲಾ ಪ್ರಾಮಾಣಿಕರಾ..? ಅವರಲ್ಲಿ ತಪ್ಪು ಮಾಡಿದವರು ಯಾರು ಇಲ್ಲವಾ ಎಂದು ದೇವೇಗೌಡರು ಪ್ರಶ್ನಿಸಿದ್ರು.
ಹೆಚ್.ಡಿ.ದೇವೇಗೌಡ
ಡಾ. ಜಿ. ಪರಮೇಶ್ವರ್ ದಿಢೀರನೇ ಆಸ್ತಿ ಮಾಡಿದವರಲ್ಲ. ಅವರ ತಂದೆಯ ಕಾಲದಿಂದಲೂ ಅವರು ಶ್ರೀಮಂತರು ಎಂದು ದೇವೇಗೌಡರು ಹೇಳಿದರು. ಬಿಜೆಪಿಯಲ್ಲಿರುವವರೆಲ್ಲಾ ಪ್ರಮಾಣಿಕರಾ..? ಅವರಲ್ಲಿ ತಪ್ಪು ಮಾಡಿದವರು ಯಾರು ಇಲ್ಲವಾ ಎಂದು ದೇವೇಗೌಡರು ಪ್ರಶ್ನಿಸಿದ್ರು.
ವಿಧಾನಸಭಾ ಕಲಾಪಗಳಿಗೆ ಮಾಧ್ಯಮ ನಿಷೇಧ ಕುರಿತು ಮಾತನಾಡಿದ ಅವರು, ವಿಧಾನಸಭಾ ಕಲಾಪಗಳಿಗೆ ಮಾಧ್ಯಮ ನಿಷೇಧ ಸರಿಯಾದ ಕ್ರಮವಲ್ಲ. ಪ್ರಜಾಪ್ರಭುತ್ವದಲ್ಲಿ ಮಾಧ್ಯಮಕ್ಕೆ ಸ್ವತಂತ್ರವಿದ್ದು, ಸ್ಪೀಕರ್ ಕಾಗೇರಿಯವರ ಈ ನಿರ್ಧಾರದ ಬಗ್ಗೆ ಕಠಿಣ ಪದಗಳಲ್ಲಿ ಪತ್ರ ಬರೆದಿದ್ದೇನೆ ಎಂದರು.