ಮೈಸೂರು:ನನಗೆ ಪಕ್ಷದಲ್ಲಿ ಇದ್ದು ರಾಜಕೀಯ ಮಾಡುತ್ತೀನಿ ಎಂಬುದಕ್ಕಿಂತ ಮುಖ್ಯವಾಗಿ ಪಕ್ಷದಲ್ಲಿ ನಡೆದಂತಹ ಯಾವುದೇ ವಿಷಯವನ್ನು ಹೇಳಿಲ್ಲ. ಚಿಕ್ಕಮಾಧು ಅವರನ್ನು ಇಟ್ಟುಕೊಂಡು ಏನು ಮಾಡಿದ್ರು, ಸಾ.ರಾ.ಮಹೇಶ್ ಅವರಿಂದ ಏನು ಮಾಡಿಸಿದ್ರು ಎಂಬುದನ್ನು ಹೇಳಿದ್ರೆ ಜನ ನೊಂದುಕೊಳ್ಳುತ್ತಾರೆ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಮತ್ತೆ ಜೆಡಿಎಸ್ ವಿರುದ್ಧ ಗುಡುಗಿದ್ದಾರೆ.
ಜೆಡಿಎಸ್ ಪಕ್ಷ, ಕುಮಾರಸ್ವಾಮಿ ವಿರುದ್ಧ ಮತ್ತೆ ಗುಡುಗಿದ ಜಿ.ಟಿ.ದೇವೆಗೌಡ - ಜೆಡಿಎಸ್
ಜೆಡಿಎಸ್ ಪಕ್ಷದ ವಿರುದ್ಧ ಮತ್ತೆ ಮಾಜಿ ಸಚಿವ ಜಿ.ಟಿ.ದೇವೇಗೌಡರು ಗುಡುಗಿದ್ದು, ಕುಮಾರಸ್ವಾಮಿ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.
ವಿಜಯನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಟಸ್ ಪಕ್ಷದ ವಿರುದ್ಧ ದೂರಿನ ಸುರಿಮಳೆಯನ್ನೇ ಸುರಿಸಿದ್ರು. ಜಿ.ಟಿ.ದೇವೇಗೌಡ್ರಿಗೆ ಮುಖ್ಯಮಂತ್ರಿ ಸ್ಥಾನ ಕೊಡುತ್ತೀನಿ. ಬೇಕಾದ ಸ್ಥಾನವನ್ನು ನೀಡುತ್ತೀನಿ ಎಂದೇಳಿ ಆ ಸ್ಥಾನವನ್ನು ನೀಡಿದಾಗಿನಿಂದ ಜನ ನನ್ನ ಬಳಿ ಬಂದಿಲ್ಲ. ಇದರಿಂದ ಜನರೇ ನೊಂದಿದ್ದಾರೆ. ಪಕ್ಷ ತನಗೆ ಮಾಡಿದ್ದನ್ನು ಜನ ನೋಡಿದ್ದಾರೆ. ಮುಖ್ಯಮಂತ್ರಿಗಳನ್ನು ಎಲ್ಲೆಲ್ಲಿ ಸೋಲಿಸಿದ್ದರೋ ಅಲ್ಲೆಲ್ಲ ಅಧಿಕಾರ ನೀಡಿದ್ದಾರೆ. ಆದರೆ ಇವರು ಮಾತ್ರ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನ ಸೋಲಿಸಿ ಹೆಚ್ಚಿನ ಮತ ಪಡೆದಿದ್ದನಲ್ಲ, ನಾಳೆ ಎಷ್ಟು ಎತ್ತರಕ್ಕೆ ಬೆಳಿತಾನೋ ಎಂದು ಮುಗಿಸಿದ್ದಾರೆ ಎಂದು ತಮ್ಮ ನೋವನ್ನು ಹೊರ ಹಾಕಿದರು.