ಮೈಸೂರು:ಜೆಡಿಎಸ್ ಪಕ್ಷ ದೇವೇಗೌಡ್ರ ಹಿಡಿತದಿಂದ ಕೈ ತಪ್ಪಿದೆ, ದೇವೇಗೌಡ್ರ ಮಾತನ್ನ ಮಕ್ಕಳು ಕೇಳ್ತಿಲ್ಲ. ಮಕ್ಕಳ ಮಾತನ್ನ ದೇವೇಗೌಡ್ರು ಕೇಳುವ ಸ್ಥಿತಿ ಇದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ನುಡಿಯೋದೆ ಒಂದು ನಡೆಯೋದೆ ಒಂದು. ದೇವೇಗೌಡರ ಬಗ್ಗೆ ನಮಗೆ ಅಪಾರ ಗೌರವ ಇದೆ. ಅವರು ನಮ್ಮನ್ನ ಬೆಳೆಸಿದವರು. ದೇವೇಗೌಡರಂತೆಯೇ ಸಿದ್ದರಾಮಯ್ಯ, ಬಿಎಸ್‌ವೈ ಬಗ್ಗೆಯೂ ಗೌರವಯುತವಾಗಿದ್ದೇನೆ. ಆದರೆ ದೇವೇಗೌಡರ ಮಾತು ಪಕ್ಷದಲ್ಲಿ ನಡೆಯುತ್ತಿಲ್ಲ ಎಂಬ ಬೇಸರವಿದೆ ಎಂದರು.
ಹೆಚ್ಡಿಕೆ ವಿರುದ್ಧ ಶಾಸಕ ಜಿ.ಟಿ. ದೇವೇಗೌಡ ಮುನಿಸು ಚುನಾವಣೆ ಬಂದಾಗ ಇವರೆಲ್ಲಾ ಎಲ್ಲಿರ್ತಾರೆ ಅಂತ ಗೊತ್ತು ಎಂಬ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿ, ನಾನು ಬೇರೆ ಪಕ್ಷಕ್ಕೆ ಹೋಗ್ತೇನೆ ಅಂತ ಕುಮಾರಸ್ವಾಮಿ ಹೇಳ್ತಾರೆ. ಗೊತ್ತಿದ್ರೆ ನಾನು ಯಾವ ಪಕ್ಷಕ್ಕೆ ಹೋಗ್ತೀನಿ ಅಂತ ಅವರೇ ಹೇಳಲಿ. ಮೈಸೂರಿಗೆ ಬಂದು ನನ್ನನ್ನ ಉಚ್ಚಾಟಿಸುತ್ತೇನೆ ಎಂದಿದ್ದಾರೆ. ಯಾವಾಗ ಬಂದು ಉಚ್ಚಾಟಿಸ್ತಾರೋ ಅಂತ ಕಾಯ್ತಾ ಇದ್ದೇನೆ. ನನ್ನ ಪಕ್ಷ ಸಂಘಟನಾ ಸಾಮರ್ಥ್ಯ ಕುಮಾರಸ್ವಾಮಿಗೆ ಗೊತ್ತಿಲ್ಲವೇ? ಎಂದು ಜಿಟಿಡಿ ಟಾಂಗ್ ಕೊಟ್ಟರು.
ಪಕ್ಷ ಸಂಘಟನೆಗೆ ಆಸಕ್ತಿ ಇಲ್ಲದವರಿಗೆ ಹೇಗೆ ಹುದ್ದೆ ಕೊಡಲಿ ಎಂಬ ಹೆಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರ ಪರ್ವ ಕಾರ್ಯಕ್ರಮ ರೂಪಿಸಿದ್ದನ್ನ ಹೆಚ್ಡಿಕೆ ಮರೆತಿದ್ದಾರೆ. ಕುಮಾರ ಪರ್ವದಿಂದಲೇ ಜೆಡಿಎಸ್ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಯ್ತು. ಹೆಚ್ಡಿಕೆ ಸಿಎಂ ಆಗಬೇಕೆಂದವರಲ್ಲಿ ನಾನೇ ಮೊದಲಿಗ ಎಂದು ಜೆಡಿಎಸ್ ಶಾಸಕ ದೇವೇಗೌಡ ಹೇಳಿದ್ರು.
ಓದಿ...ಚೆನ್ನೈ ಏರ್ಪೋರ್ಟ್: ರನ್ವೇಯಲ್ಲಿಯೇ ಏರ್ ಇಂಡಿಯಾದ ಉದ್ಯೋಗಿ ಸಾವು